ಕೊಪ್ಪಳ: ಬೈಕ್ಗಳನ್ನು ಕಳ್ಳತನ ಮಾಡುತ್ತಿದ್ದ ವ್ಯಕ್ತಿಯನ್ನು ನಗರ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಅಳವಂಡಿ ಗ್ರಾಮದ ನಿವಾಸಿ ವೀರೇಶ ಬಂಧಿತ ವ್ಯಕ್ತಿ. ಆರೋಪಿ ವೀರೇಶ ಬೇರೆ ಬೇರೆ ಕಡೆಯಿಂದ ಬೈಕ್ ಕದ್ದು ಇಂಜಿನ್, ಚೆಸ್ಸಿ ನಂಬರ್ ಬದಲಾವಣೆ ಮಾಡುತ್ತಿದ್ದ ಎನ್ನಲಾಗಿದೆ.
ಬಂಧಿತನಿಂದ 6 ಬೈಕ್, ಚೆಸ್ಸಿ ನಂಬರ್ ಬದಲಾವಣೆ ಮಾಡುವ ಉಪಕರಣ ವಶಪಡಿಸಿಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ.