ETV Bharat / state

ಅಪಘಾತವೆಸಗಿ ಪರಾರಿಯಾಗಲು ಯತ್ನಿಸಿದ ಲಾರಿ ಚಾಲಕ ಅರೆಸ್ಟ್​! - ಕೊಪ್ಪಳ ಲೇಟೆಸ್ಟ್​ ನ್ಯೂಸ್

ಕಳೆದ ಗುರುವಾರ ಕುಷ್ಟಗಿ ಹೆದ್ದಾರಿಯ ದೋಟಿಹಾಳ ಕ್ರಾಸ್​ನಲ್ಲಿ ಬೈಕ್​ಗೆ ಡಿಕ್ಕಿ ಹೊಡೆದು ಪರಾರಿಯಾಗಲು ಯತ್ನಿಸಿದ ಲಾರಿ ಚಾಲಕನನ್ನು ಮೂವರು ಪ್ರತ್ಯಕ್ಷದರ್ಶಿ ಯುವಕರು ವಶಕ್ಕೆ ಪಡೆದು, ಪೊಲೀಸರಿಗೆ ಒಪ್ಪಿಸಿದ್ದಾರೆ.

arrest-is-a-lorry-driver-trying-to-escape-the-accident
ಅಪಘಾತವೆಸಗಿ ಪರಾರಿಯಾಗಲು ಯತ್ನಿಸಿದ ಲಾರಿ ಚಾಲಕ ಅರೆಸ್ಟ್​!
author img

By

Published : Jan 22, 2021, 11:13 AM IST

ಕುಷ್ಟಗಿ (ಕೊಪ್ಪಳ): ಬೈಕ್​ಗೆ ಡಿಕ್ಕಿ ಹೊಡೆದು ಪರಾರಿಯಾಗಲು ಯತ್ನಿಸಿದ ಲಾರಿ ಚಾಲಕನನ್ನು ಮೂವರು ಪ್ರತ್ಯಕ್ಷದರ್ಶಿ ಯುವಕರು ಸಿನಿಮೀಯ ರೀತಿಯಲ್ಲಿ ಚೇಸ್ ಮಾಡಿದ್ದಾರೆ.

ಅಪಘಾತವೆಸಗಿ ಪರಾರಿಯಾಗಲು ಯತ್ನಿಸಿದ ಲಾರಿ ಚಾಲಕ ಅರೆಸ್ಟ್​!

ಕುಷ್ಟಗಿ ಪಟ್ಟಣದ ನಾಲ್ಕನೇ ವಾರ್ಡ್​ನ ಬಸವರಾಜ ಬೆಲ್ಲದ ಎಂಬ ಯುವಕ ಕಳೆದ ಗುರುವಾರ ಬೈಕ್​ನಲ್ಲಿ ದೇವಸ್ಥಾನಕ್ಕೆ ತೆರಳಿದ್ದ. ಕುಷ್ಟಗಿ ಹೆದ್ದಾರಿಯ ದೋಟಿಹಾಳ ಕ್ರಾಸ್​ನಲ್ಲಿ ವೇಗದಿಂದ ಬಂದ ಲಾರಿ ಚಾಲಕ, ಯುವಕನ ಬೈಕ್​ಗೆ ಹಿಂಬದಿಯಿಂದ ಡಿಕ್ಕಿ ಹೊಡೆದು ಪರಾರಿಯಾಗಲು ಯತ್ನಿಸಿದ್ದಾನೆ.

ಈ ವೇಳೆ, ಹೆದ್ದಾರಿ ಪಕ್ಕದಲ್ಲೇ ಕಾರಿಗೆ ಪಂಚರ್ ಹಾಕಿಸುತ್ತಿದ್ದ ಕುಷ್ಟಗಿಯ ಪಕೀರಪ್ಪ ಬಸವರಾಜ್ ಮೂಲಿ, ರವಿಕುಮಾರ ತಿಮ್ಮಣ್ಣ ರಾಯಗಿ, ಗುರುಪ್ರಸಾದ್​ ಅಡಿವೆಪ್ಪ ಕೊನಸಾಗರ ಎಂಬ ಮೂವರು ಸ್ನೇಹಿತರು, ಕೂಡಲೇ ಅಲ್ಲಿದ್ದವರ ಬೈಕ್ ಸಹಾಯ ಪಡೆದು ಲಾರಿಯನ್ನು ಬೆನ್ನಟ್ಟಿದ್ದಾರೆ.

ಅಷ್ಟರಲ್ಲೇ ಇನ್ನೋರ್ವ ಪ್ರತ್ಯಕ್ಷ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಕಾರ್ಯಪ್ರವೃತ್ತರಾದ ಸಿಪಿಐ ನಿಂಗಪ್ಪ ರುದ್ರಪ್ಪಗೋಳ, ಪರಾರಿಯಾಗಲು ಯತ್ನಿಸಿದ್ದ ಚಾಲಕ ಹಾಗೂ ಲಾರಿಯನ್ನು ವಶಕ್ಕೆ ಪಡೆದಿದ್ದಾರೆ. ಪ್ರತ್ಯಕ್ಷದರ್ಶಿ ಯುವಕರ ಸಮಯ ಪ್ರಜ್ಞೆಗೆ ಮೆಚ್ಚುಗೆ ವ್ಯಕ್ತವಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.