ಕುಷ್ಟಗಿ (ಕೊಪ್ಪಳ): ಕುಷ್ಟಗಿಯ ಅರಾಳಗೌಡ್ರು ಪದವಿ ಪೂರ್ವ ಕಾಲೇಜಿನ ಸವಿತಾ ಪಾಟೀಲ ದ್ವಿತೀಯ ಪಿಯುಸಿ ಫಲಿತಾಂಶದ ಮರು ಮೌಲ್ಯಮಾಪನದಲ್ಲಿ ಕಾಲೇಜಿಗೆ ಪ್ರಥಮ ಸ್ಥಾನ ಗಳಿಸಿದ್ದಾಳೆ.
ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಸವಿತಾ ಪಾಟೀಲ ಒಟ್ಟು 551 (ಶೇ 91.83) ಅಂಕಗಳೊಂದಿಗೆ ಕಾಲೇಜಿಗೆ ದ್ವಿತೀಯ ಸ್ಥಾನ ಗಳಿಸಿದ್ದರು. ಸಮಾಜಶಾಸ್ತ್ರ ವಿಷಯದಲ್ಲಿ 83 ಅಂಕಗಳು ಬಂದಿರುವ ಹಿನ್ನೆಲೆ, ಪುನಃ ಮರುಮೌಲ್ಯಮಾಪನಕ್ಕೆ ಅರ್ಜಿ ಹಾಕಿದ್ದರು. ಇದೀಗ ಮರು ಮೌಲ್ಯಮಾಪನದ ವೇಳೆ ಸಮಾಜಶಾಸ್ತ್ರದಲ್ಲಿ 8 ಅಂಕಗಳು ಹೆಚ್ಚುವರಿಯಾಗಿ ಬಂದಿವೆ.
ಒಟ್ಟಾರೆ ಅಂಕ 559 (ಶೇ.93.16) ಬಂದಿದ್ದು, ಕಾಲೇಜಿಗೆ ದ್ವಿತೀಯ ಸ್ಥಾನದಲ್ಲಿದ್ದ ಸವಿತಾ ಪಾಟೀಲ ಇದೀಗ ಕಾಲೇಜಿಗೆ ಪ್ರಥಮ ಸ್ಥಾನಗಳಿಸಿದ್ದಾಳೆ. ಸವಿತಾ ಸಾಧನೆಗೆ ಕಾಲೇಜಿನ ಪ್ರಾಚಾರ್ಯ ಶಿವಕುಮಾರ ಅರಾಳಗೌಡ್ರು ಅಭಿನಂದಿಸಿದ್ದಾರೆ.