ಗಂಗಾವತಿ: ಕಳೆದ ಒಂದು ತಿಂಗಳ ಹಿಂದೆಯಷ್ಟೆ ಸ್ಥಳೀಯ ಮಾರುಕಟ್ಟೆಯಲ್ಲಿ 200ರಿಂದ 300 ರೂಪಾಯಿಗೆ ಏರಿಕೆಯಾಗಿದ್ದ ಸೇಬು ಏಕಾಏಕಿ ಬೆಲೆ ಕಳೆದುಕೊಂಡಿದ್ದು, ಅಗ್ಗದ ಬೆಲೆಗೆ ಮಾರಾಟವಾಗುತ್ತಿದೆ.
ಒಂದು ವಾರದ ಹಿಂದೆಯಷ್ಟೆ ಆ್ಯಪಲ್ ಕಿಲೋಗೆ ರೂ.150ರಿಂದ 200ರ ಆಸುಪಾಸಿನಲ್ಲಿತ್ತು. ದುಬಾರಿಯಾಗಿದ್ದರೂ ಜನ ಅನಿವಾರ್ಯವಾಗಿ ಕೊಂಡುಕೊಳ್ಳಬೇಕಾಗಿತ್ತು. ಆದರೆ ಭಾನುವಾರದ ಸ್ಥಳೀಯ ಮಾರುಕಟ್ಟೆಯಲ್ಲಿ ಕೆಜಿಗೆ ಕೇವಲ 50ರಿಂದ 60 ರೂಪಾಯಿಗೆ ಸೇಬು ಮಾರಾಟವಾಗಿದ್ದು, ಜನ ಖುಷಿಯಿಂದ ಖರೀದಿಸಿದರು.
ಉತ್ತರ ಭಾರತದಲ್ಲಿ ಹೆಚ್ಚಾಗಿ ಬೆಳೆಯುವ ಸೇಬಿನ ಬೆಳೆ, ಅಲ್ಲಿ ಸರಿಯಾದ ಮಾರುಕಟ್ಟೆ ಹಾಗೂ ಪ್ರಾಕೃತಿಕ ಪ್ರತಿಕೂಲ ಪರಿಸ್ಥಿತಿ ಇರುವ ಕಾರಣ ಹೆಚ್ಚಿನ ಪ್ರಮಾಣದದಲ್ಲಿ ದಕ್ಷಿಣ ಭಾರತಕ್ಕೆ ಸರಬರಾಜಾಗುತ್ತಿದೆ. ಇದು ಬೆಲೆ ಇಳಿಕೆಗೆ ಕಾರಣ ಎನ್ನಲಾಗುತ್ತಿದೆ.