ಗಂಗಾವತಿ(ಕೊಪ್ಪಳ): ವಿಜಯನಗರದ ಸೆರಗಲ್ಲಿರುವ ಆನೆಗೊಂದಿ ಸಮೀಪದ ಅಂಜನಾದ್ರಿಯೇ ಹನುಮನ ಜನ್ಮ ಭೂಮಿ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಯಾರು ಏನೇ ಹೇಳಿದರೂ ಕಿಷ್ಕಿಂಧೆಯೇ ನಮ್ಮ ಹನುಮನ ಜನ್ಮಭೂಮಿ ಎಂದು ಸಂಸದ ತೇಜಸ್ವಿಸೂರ್ಯ ಹೇಳಿದರು.
ಬಿಜೆಪಿ ಹಮ್ಮಿಕೊಂಡಿರುವ ಭಾರತ ದರ್ಶನ ಯಾತ್ರೆಯ ಭಾಗವಾಗಿ ಗಂಗಾವತಿ ತಾಲೂಕಿನ ಆನೆಗೊಂದಿ ಸಮೀಪದ ನವವೃಂದಾವನ ಗೆಡ್ಡೆ ಮತ್ತು ಚಿಕ್ಕರಾಂಪೂರದ ಅಂಜನಾದ್ರಿ ದೇಗುಲಕ್ಕೆ ಭೇಟಿ ನೀಡಿದ ತೇಜಸ್ವಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. ಭಾರತದಾದ್ಯಂತ ಯಾತ್ರೆ ಕೈಗೊಂಡಾಗ ಸಾವಿರಾರು ಸ್ಥಳಗಳು ರಾಮಾಯಣದ ಕಾಲಘಟ್ಟದೊಂದಿಗೆ ಹೋಲಿಕೆಯಾಗಿರುವುದು ಕಂಡು ಬರುತ್ತಿದೆ. ಹೀಗಾಗಿ ಪ್ರತೀತಿಗಳ ಮೇಲೆ ಭಾರತ ನಂಬಿಕೆ ಇಟ್ಟಿದೆ. ಯಾವುದನ್ನೂ ಅಲ್ಲಗಳೆಯುವಂತಿಲ್ಲ ಎಂದರು.
ಆದರೆ ಅಂಜನಾದ್ರಿ ವಿಚಾರವಾಗಿ ಹೇಳುವುದಾದರೆ ಕಿಷ್ಕಿಂಧೆ ಎಲ್ಲಿತ್ತು, ಹೇಗಿತ್ತು, ಅದರ ಸುತ್ತಲಿನ ಪರಿಸರ ಹೇಗಿತ್ತು ಎಂಬುದರ ಬಗ್ಗೆ ವಾಲ್ಮಿಕಿ ನೀಡುವ ಉದಾಹರಣೆಗಳು ಕಿಷ್ಕಿಂಧೆಗೆ ಹೆಚ್ಚು ಸಾಮಿಪ್ಯ ಇರುವ ಕಾರಣಕ್ಕೆ ಈ ಅಂಜನಾದ್ರಿಯೇ ಹನುಮನ ಜನ್ಮಸ್ಥಳ ಎಂಬುದು ಉಲ್ಲೇಖವಾಗುತ್ತದೆ.
ಇದನ್ನೂ ಓದಿ:ಯುಗಾದಿ ಹಬ್ಬದಂದು ಯಡಿಯೂರಪ್ಪ ನಿವಾಸಕ್ಕೆ ಹೊಸ ಅತಿಥಿ ಆಗಮನ..