ಗಂಗಾವತಿ: ಕೊರೊನಾ ಪರಿಣಾಮದಿಂದ ಸುಧೀರ್ಘ ಎರಡೂವರೆ ತಿಂಗಳ ಬಳಿಕ ಇದೇ ಮೊದಲ ಬಾರಿಗೆ ರಾಜ್ಯದಾದ್ಯಂತ ಇರುವ ಪ್ರಮುಖ ಪ್ರಾರ್ಥನಾ ಮಂದಿರಗಳ ಆರಂಭಕ್ಕೆ ರಾಜ್ಯ ಸರ್ಕಾರ ಈಗ ಗ್ರೀನ್ ಸಿಗ್ನಲ್ ನೀಡಿದೆ.
ಇದರ ಭಾಗವಾಗಿ ತಾಲೂಕಿನ ಐತಿಹಾಸಿಕ ಹಾಗೂ ಧಾರ್ಮಿಕ ಪುಣ್ಯ ಕ್ಷೇತ್ರವಾದ ಅಂಜನಾದ್ರಿ ಬೆಟ್ಟದಲ್ಲಿರುವ ಆಂಜನೇಯನ ದೇಗುಲದ ಆರಂಭಕ್ಕೆ ದೇಗುಲದ ಆಡಳಿತಾಧಿಕಾರಿ ಹಾಗೂ ಸಿಬ್ಬಂದಿ ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ. ಸುಣ್ಣ-ಬಣ್ಣ ಕಂಡು ದೇಗುಲ ಹೊಳೆಯುತ್ತಿದೆ.
ಇನ್ನು ಲಾಕ್ಡೌನ್ ಇರುವ ಕಾರಣ ದೈವರ ದರ್ಶನಕ್ಕೆಂದು ದೇಗುಲಕ್ಕೆ ಬರುವ ಭಕ್ತರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕಿದೆ. ಅಲ್ಲದೇ ಆರು ಅಡಿಗಳಷ್ಟು ಸಾಮಾಜಿಕ ಅಂತರ ಕಾಪಾಡುವ ಉದ್ದೇಶಕ್ಕೆ ಈಗಾಗಲೆ ದೇಗುಲದ ಮುಂದೆ ಬಾಕ್ಸ್ಗಳನ್ನು ಹಾಕಲಾಗಿದೆ.