ಗಂಗಾವತಿ(ಕೊಪ್ಪಳ): ತಾಲೂಕಿನ ಪ್ರಮುಖ ಧಾರ್ಮಿಕ ಕೇಂದ್ರವಾಗಿರುವ ಚಿಕ್ಕರಾಂಪುರದ ಅಂಜನಾದ್ರಿ ಬೆಟ್ಟದ ಆಂಜನೇಯನ ದೇವಸ್ಥಾನದಲ್ಲಿ ಕಾಣಿಕೆ ಹುಂಡಿಯ ಹಣ ಎಣಿಕೆ ಮಾಡಲಾಯಿತು. ಎಣಿಕೆ ಮಾಡುವಾಗ ಐದು ದೇಶಗಳ ಎರಡು ನೋಟು ಮತ್ತು ಮೂರು ನಾಣ್ಯಗಳು ಪತ್ತೆಯಾಗಿವೆ. ಯುನೈಟೆಡ್ ಸ್ಟೇಟ್ ಆಫ್ ಅಮೆರಿಕದ 20 ಡಾಲರ್, ಸೌದಿ ಅರೇಬಿಯಾದ ಐದು ರಿಯಾಲ್ಸ್, ಇಂಗ್ಲೆಂಡ್, ಓಮನ್ ಮತ್ತು ಅಮೆರಿಕದ ಬಹುಮುಖ ಬೆಲೆಯ ನಾಣ್ಯಗಳು ಹನುಮಪ್ಪನ ಹುಂಡಿಯಲ್ಲಿ ಪತ್ತೆಯಾಗಿವೆ.
ಹುಂಡಿಯಲ್ಲಿ ಹಣ ಎಣಿಕೆ ಮಾಡಲಾಗಿದ್ದು, ಒಟ್ಟು 43 ದಿನಕ್ಕೆ 31 ಲಕ್ಷ 77 ಸಾವಿರ ರೂ. ನಗದು ಹಣ ಸಂಗ್ರಹವಾಗಿದೆ. ಕಳೆದ ತಿಂಗಳು ಅಂದರೆ ಆಗಸ್ಟ್ 8ರಂದು ಎಣಿಕೆ ಮಾಡಿದ್ದಾಗ ಹುಂಡಿಯಲ್ಲಿ 25ಲಕ್ಷದ 27 ಸಾವಿರ ರೂ. ನಗದು ಹಣ ಸಂಗ್ರಹವಾಗಿತ್ತು.
ದೇಗುಲದ ಸಿಸಿ ಕ್ಯಾಮರಾಗಳ ಕಣ್ಗಾವಲಿನಲ್ಲಿ ಹಾಗೂ ಪೊಲೀಸ್ ಬಿಗಿಭದ್ರತೆಯಲ್ಲಿ ಕಂದಾಯ ಇಲಾಖೆಯ ಗ್ರೇಡ್-2 ತಹಶೀಲ್ದಾರ್ ರವಿ ನಾಯಕವಾಡಿ ನೇತೃತ್ವದಲ್ಲಿ ಹಣದ ಎಣಿಕೆ ಕಾರ್ಯ ನಡೆಯಿತು. ಕಂದಾಯ ಮತ್ತು ದೇಗುಲದ 20ಕ್ಕೂ ಹೆಚ್ಚು ಸಿಬ್ಬಂದಿ ಭಾಗಿಯಾಗಿದ್ದರು.
ಇದನ್ನೂಓದಿ:ಹುಬ್ಬಳ್ಳಿ : ಈದ್ಗಾ ಮೈದಾನದಲ್ಲಿ ಪ್ರತಿಷ್ಠಾಪಿಸಿದ್ದ ಗಣೇಶನ ಅದ್ಧೂರಿ ಮೆರವಣಿಗೆ