ಗಂಗಾವತಿ: ಜನವರಿ 9 ಮತ್ತು 10ರಂದು ನಡೆಯುವ ಆನೆಗೊಂದಿ ಉತ್ಸವ-2020ರ ಅಂಗವಾಗಿ ಮಹಿಳೆಯರು ಹಾಗೂ ಪುರುಷರಿಗೆ ವಿಜಯನಗರ ಕಾಲದ ಪಾರಂಪರಿಕ ಅಡುಗೆ ತಯಾರಿಸುವ ಸ್ಪರ್ದೆಯನ್ನು ಜಿಲ್ಲಾಡಳಿತ ಏರ್ಪಡಿಸಿದೆ.
ಸ್ಪರ್ಧೆಯಲ್ಲಿ ಭಾಗಿವಹಿಸಿ ಮೊದಲ ಮೂರು ಸ್ಥಾನ ಪಡೆಯುವ ಮಹಿಳೆ ಅಥವಾ ಪುರುಷರಿಗೆ ಕ್ರಮವಾಗಿ ಹದಿನೈದು, ಹತ್ತು ಹಾಗೂ ಏಳೂವರೆ ಸಾವಿರ ನಗದು ನೀಡಿ ಪ್ರೋತ್ಸಾಹಿಸಲಾಗುತ್ತದೆ. ಹಾಗೆಯೇ ಸ್ಥಳೀಯ ಪದ್ಧತಿಯಲ್ಲಿ ಅಡುಗೆ ಮಾಡುವ ಸ್ಪರ್ಧೆಯನ್ನೂ ಆಯೋಜಿಸಲಾಗಿದೆ. ಹೆಸರು ನೋಂದಾಯಿಸಲು ಜ. 3 ಕೊನೆಯ ದಿನವಾಗಿದ್ದು, ಜ. 5ರಂದು ಗ್ರಾಮದಲ್ಲಿ ಸ್ಫರ್ಧೆ ನಡೆಯಲಿದೆ. ಹೆಚ್ಚಿನ ಮಾಹಿತಿಗೆ ಮೊಬೈಲ್ ಸಂಖ್ಯೆ: 8310750148ಕ್ಕೆ ಸಂಪರ್ಕಿಸಬಹುದು.