ಕೊಪ್ಪಳ: ಈಗಾಗಲೇ ಎಸ್‌ಎಸ್‌ಎಲ್‌ಸಿ ಫಲಿತಾಂಶ ಹೊರಬಿದ್ದಿದ್ದು,ಆ್ಯಂಬುಲೆನ್ಸ್ ಚಾಲಕರೊಬ್ಬರ ಮಗಳು ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 625 ಕ್ಕೆ 616 ಅಂಕಗಳನ್ನು ಪಡೆಯುವ ಮೂಲಕ ಸಾಧನೆ ಮಾಡಿದ್ದಾರೆ. ಜಿಲ್ಲೆಯ ಕೊಪ್ಪಳ ತಾಲೂಕಿನ ಹನಕುಂಟಿ ಗ್ರಾಮದಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿನಿ ಪ್ರಿಯಾಂಕ ಓಜಿನಹಳ್ಳಿ ಈ ಸಾಧನೆ ಮಾಡಿದ ವಿದ್ಯಾರ್ಥಿನಿಯಾಗಿದ್ದಾರೆ.
ಮೂಲತಃ ಕೊಪ್ಪಳ ತಾಲೂಕಿನ ಕೂಕನಪಳ್ಳಿ ಗ್ರಾಮದ ನಿಂಗಜ್ಜ ಹಾಗೂ ಪವಿತ್ರ ಓಜನಹಳ್ಳಿ ಎಂಬ ದಂಪತಿ ಪುತ್ರಿಯಾಗಿರುವ ಪ್ರಿಯಾಂಕ ಈ ಬಾರಿಯ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉತ್ತಮ ಅಂಕಗಳಿಸುವುದರೊಂದಿಗೆ ತಮ್ಮ ತಂದೆ ತಾಯಿಯ ಕನಸನ್ನು ಸಾಕಾರಗೊಳಿಸಿದ್ದಾಳೆ. ಪ್ರಿಯಾಂಕಳ ತಂದೆ ನಿಂಗಜ್ಜ ಓಜಿನಹಳ್ಳಿ ಅವರು ಆ್ಯಂಬುಲೆನ್ಸ್ ಚಾಲಕರಾಗಿದ್ದು, ತಾಯಿ ಪವಿತ್ರ ಅವರು ಟೈಲರಿಂಗ್ ವೃತ್ತಿ ಮಾಡುತ್ತಿದ್ದಾರೆ.
ತಮಗೆ ಬರುವ ಆದಾಯದಲ್ಲಿ ಮಕ್ಕಳಿಗೆ ಒಳ್ಳೆಯ ಶಿಕ್ಷಣ ಕೊಡಿಸಿ ಅವರನ್ನು ವಿದ್ಯಾವಂತರನ್ನಾಗಿ ಮಾಡಬೇಕೆನ್ನುವುದು ಈ ದಂಪತಿಯ ಆಸೆಯಾಗಿದೆ. ಮಗಳನ್ನು ಓದಿಸಿ ದೊಡ್ಡ ವೈದ್ಯೆಯನ್ನಾಗಿಸಬೇಕು ಎಂಬುದು ಪ್ರಿಯಾಂಕಳ ತಂದೆ ನಿಂಗಜ್ಜ ಅವರ ಕನಸಾಗಿದೆ.
ಓದಿ : SSLC Result 2022: ಒಟ್ಟಿಗೆ ಪರೀಕ್ಷೆ ಬರೆದ ತಾಯಿ - ಮಗಳು ಪಾಸ್