ETV Bharat / state

ಕೆರೆ ಹೂಳೆತ್ತುವ ಕಾಮಗಾರಿ ಪರಿಶೀಲಿಸಿದ ಶಾಸಕ ಬಯ್ಯಾಪೂರ.. - Kushtagi koppala latest news

ಸೋಪಿನಿಂದ ಕೈ ತೊಳೆಯದೇ ಕಣ್ಣು, ಮೂಗು, ಬಾಯಿ ಮುಟ್ಟಿಕ್ಕೊಳ್ಳಬೇಡಿ. ಕೆಲ ದಿನಗಳಿಂದ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ. ಹಾಗಾಗಿ ಜನ ಹೆಚ್ಚು ಜಾಗರೂಕರಾಗಿರಬೇಕು.

Amaregiwda patila baiyapura
Amaregiwda patila baiyapura
author img

By

Published : Jun 7, 2020, 8:35 PM IST

ಕುಷ್ಟಗಿ : ತಾಲೂಕಿನ ತುಗ್ಗಲದೋಣಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕೆರೆ ಹೂಳೆತ್ತುವ ಕಾಮಗಾರಿಯನ್ನು ಶಾಸಕ ಅಮರೇಗೌಡ ಪಾಟೀಲ ಬಯ್ಯಾಪೂರ ಪರಿಶೀಲಿಸಿದರು.

ಕೆರೆ ಹೂಳೆತ್ತುವ ಕಾಮಗಾರಿಯಲ್ಲಿ 347 ಕೂಲಿಕಾರರು ಇದ್ದು, ಇದು 7 ಮಾನವ ದಿನಗಳ ಕೆಲಸವಾಗಿದೆ. ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಂಡು ಕಾಮಗಾರಿ ನಡೆಯುತ್ತಿದೆಯೇ ಎಂದು ಶಾಸಕರು ಪರಿಶೀಸಿದರು. ಬಳಿಕ ಎಲ್ಲಾ ಕೂಲಿಕಾರರಿಗೆ ಮಾಸ್ಕ್, ಸ್ಯಾನಿಟೈಜರ್‌ ವಿತರಿಸಿದರು.

ಬಳಿಕ ಮಾತನಾಡಿದ ಶಾಸಕರು, ಕೊರೊನಾ ವೈರಸ್‌ ಭಯಪಡುವ ರೋಗವಲ್ಲ. ಆದರೆ, ಸಾಮಾಜಿಕ ಅಂತರ ಪಾಲನೆ ಹಾಗೂ ಮಾಸ್ಕ್‌ ಕಡ್ಡಾಯವಾಗಿ ಧರಿಸಬೇಕು. ಸೋಪಿನಿಂದ ಕೈ ತೊಳೆಯದೇ ಕಣ್ಣು, ಮೂಗು, ಬಾಯಿ ಮುಟ್ಟಿಕ್ಕೊಳ್ಳಬೇಡಿ. ಕೆಲ ದಿನಗಳಿಂದ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ. ಹಾಗಾಗಿ ಜನ ಹೆಚ್ಚು ಜಾಗರೂಕರಾಗಿರಬೇಕು ಎಂದು ತಿಳಿಸಿದರು.

ಈ ವೇಳೆ ತಾಪಂ ಇಒ ಕೆ ತಿಮ್ಮಪ್ಪ, ಪಿಡಿಒ ಬಸವರಾಜ್ ಬಳಕೋಡ್, ನರೇಗಾ ಯೋಜನೆಯ ಐಇಸಿ ಸಂಯೋಜಕ ಚಂದ್ರಶೇಖರ್ ಹಿರೇಮಠ ಭಾಗವಹಿಸಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.