ETV Bharat / state

ಉಪಸಭಾಪತಿ ಆತ್ಮಹತ್ಯೆಗೆ ಪರಿಷತ್ ಕುರ್ಚಿ ಗಲಾಟೆ ಕಾರಣ ಅಲ್ಲ: ಬಯ್ಯಾಪುರ - MLA Amaregauda Patil Bayapura

ವಿಧಾನಪರಿಷತ್ ಗಲಾಟೆ ಪ್ರಕರಣದಿಂದ ಧರ್ಮೇಗೌಡ್ರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲು ಸಾಧ್ಯವಿಲ್ಲ. ಅವರ ಆತ್ಮಹತ್ಯೆಗೆ ಬೇರೆ ಕಾರಣಗಳಿರಬಹುದು ಎಂದು ಶಾಸಕ ಅಮರೇಗೌಡ ಪಾಟೀಲ ಬಯ್ಯಾಪುರ ಹೇಳಿದರು.

ಅಮರೇಗೌಡ ಪಾಟೀಲ
ಅಮರೇಗೌಡ ಪಾಟೀಲ
author img

By

Published : Dec 29, 2020, 3:26 PM IST

ಕುಷ್ಟಗಿ (ಕೊಪ್ಪಳ): ವಿಧಾನಪರಿಷತ್ ಗಲಾಟೆ ಪ್ರಕರಣದಿಂದ ಧರ್ಮೇಗೌಡ್ರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲು ಸಾಧ್ಯವಿಲ್ಲ. ಅವರ ಆತ್ಮಹತ್ಯೆಗೆ ಬೇರೆ ಕಾರಣಗಳಿರಬಹುದು.‌ ಜನಸಾಮಾನ್ಯರಲ್ಲಿ ಬೆರೆಯುವ ವ್ಯಕ್ತಿ ಏಕೆ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ?. ಈ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳುವ ಸಂದರ್ಭ ಬಂದಿದೆ ಎಂದು ಶಾಸಕ ಅಮರೇಗೌಡ ಪಾಟೀಲ ಬಯ್ಯಾಪುರ ಹೇಳಿದರು.

ಈಟಿವಿ ಭಾರತದೊಂದಿಗೆ ಮಾತನಾಡಿದ ಶಾಸಕ ಅಮರೇಗೌಡ ಪಾಟೀಲ ಬಯ್ಯಾಪುರ

ಅವರೊಬ್ಬ ಸರಳ‌ ಜೀವಿ, ರಾಜಕೀಯ ಹಿನ್ನೆಲೆಯಿಂದ ಬಂದವರು. ಅವರ ತಂದೆ ಎರಡು ಬಾರಿ ಶಾಸಕರಾಗಿದ್ದರು. ಧರ್ಮೇಗೌಡ್ರು ಸಹ ಒಮ್ಮೆ ಶಾಸಕರಾಗಿದ್ದರು. ಇಂತಹ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿರುವುದು ತೀವ್ರ ನೋವಿನ ಸಂಗತಿ ಎಂದು ಅವರು ಹೇಳಿದರು.

ಧರ್ಮೇಗೌಡರ ಅಕಾಲಿಕ ನಿಧನಕ್ಕೆ ಸಂತಾಪ ಸೂಚಿಸಿದ ಬಯ್ಯಾಪುರ, ಮೃತರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿಯನ್ನು ದೇವರು ಕರುಣಿಸಲಿ ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.