ಕೊಪ್ಪಳ: ಹೈದ್ರಾಬಾದ್‌ನಲ್ಲಿ ಪಶುವೈದ್ಯೆಯ ಮೇಲೆ ಅತ್ಯಾಚಾರ ನಡೆಸಿ ಕೊಲೆ ಮಾಡಿದ್ದ ಆರೋಪಿಗಳನ್ನು ಪೊಲೀಸರು ಎನ್ಕೌಂಟರ್ ಮಾಡಿದ್ದು ಶ್ಲಾಘನೀಯ ಎಂದು ಕುಷ್ಟಗಿ ಶಾಸಕ ಅಮರೇಗೌಡ ಪಾಟೀಲ್ ಬಯ್ಯಾಪೂರ ಹೇಳಿದ್ದಾರೆ.
ಕುಷ್ಟಗಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಪ್ರಪಂಚದ ಬೇರೆ ದೇಶಗಳಲ್ಲಿ ಇಂತಹ ಹೇಯ ಕೃತ್ಯವೆಸಗಿದವರಿಗೆ ಕೂಡಲೇ ಶಿಕ್ಷೆ ನೀಡಲಾಗುತ್ತದೆ. ಅದೇ ರೀತಿ ನಮ್ಮ ದೇಶದಲ್ಲಿಯೂ ಪಾಲನೆಯಾಗಬೇಕು. ಹಾಗಾದಾಗ ಅಂತವರಿಗೆ ಭಯವಿರುತ್ತದೆ. ಹೈದರಾಬಾದ್ ಪೊಲೀಸರು ಮಾಡಿದ ಕಾರ್ಯ ಒಳ್ಳೆಯದು. ಇದಕ್ಕೆ ಬೇರೆ ಅರ್ಥ ಕೊಡಬೇಕಾಗಿಲ್ಲ. ಕಾನೂನುನನ್ನು ಸರ್ಕಾರ, ಅಧಿಕಾರಿಗಳು ಕೈಗೆ ತಗೆದುಕೊಂಡಿರಬಹುದು ಎಂದು ಮಾತಾಡಬಹುದು. ಆದರೆ ಇದು ನಮ್ಮ ಪೊಲೀಸರು ಉದ್ದೇಶಪೂರ್ವಕವಾಗಿ ಮಾಡಿದ ಎನ್ಕೌಂಟರ್ ಅಲ್ಲ. ಆರೋಪಿಗಳು ಪೊಲೀಸರ ಮೇಲೆ ಹಲ್ಲೆಗೆ ಮುಂದಾಗಿದ್ದರು. ಅಂತಹ ಸಮಯದಲ್ಲಿ ಆತ್ಮರಕ್ಷಣೆಗಾಗಿ ಪೊಲೀಸರು ಎನ್ಕೌಂಟರ್ ಮಾಡಿದ್ದಾರೆ. ಇದೊಂದು ಶ್ಲಾಘನೀಯ ಕೆಲಸ ಎಂದು ಶಾಸಕ ಅಮರೇಗೌಡ ಪಾಟೀಲ್ಬಯ್ಯಾಪೂರ ಅವರು ಪೊಲೀಸರ ಕಾರ್ಯಕ್ಕೆ ಪ್ರಶಂಸೆ ವ್ಯಕ್ತಪಡಿಸಿದರು.