ETV Bharat / state

ಅಂಜನಾದ್ರಿಗೆ ಬಂದಿದ್ದ ಉತ್ತರ ಪ್ರದೇಶ ಯಾತ್ರಾರ್ಥಿಗಳ ಮೇಲೆ ಹಲ್ಲೆ ಆರೋಪ: ಠಾಣೆಗೆ ಮುತ್ತಿಗೆ

ಅಂಜನಾದ್ರಿ ಸೇರಿದಂತೆ ಧಾರ್ಮಿಕ ತಾಣಗಳಿಗೆ ಯಾತ್ರೆಗೆಂದು ಬಂದಿದ್ದ ಉತ್ತರ ಪ್ರದೇಶದ ನೂರಾರು ಜನ ಗಂಗಾವತಿ ಗ್ರಾಮೀಣ ಠಾಣೆಗೆ ಮುತ್ತಿಗೆ ಹಾಕಿದ ಘಟನೆ ನಡೆದಿದೆ.

assault
ಠಾಣೆಗೆ ಮುತ್ತಿಗೆ
author img

By ETV Bharat Karnataka Team

Published : Jan 3, 2024, 12:17 PM IST

Updated : Jan 3, 2024, 2:02 PM IST

ಠಾಣೆಗೆ ಮುತ್ತಿಗೆ ಹಾಕಿದ ಯಾತ್ರಾರ್ಥಿಗಳು

ಗಂಗಾವತಿ : ತಾಲೂಕಿನ ಆನೆಗೊಂದಿ ಹೋಬಳಿಯಲ್ಲಿರುವ ಧಾರ್ಮಿಕ ತಾಣಗಳಿಗೆ ಯಾತ್ರೆಗೆಂದು ಬಂದಿದ್ದ ನಮ್ಮ ಮೇಲೆ ಹಲ್ಲೆ ಮಾಡಿದ್ದು, ಕೂಡಲೇ ಆರೋಪಿಗಳನ್ನು ಬಂಧಿಸುವಂತೆ ಒತ್ತಾಯಿಸಿ ಉತ್ತರ ಪ್ರದೇಶದ ನೂರಾರು ಮಂದಿ ಗಂಗಾವತಿ ಗ್ರಾಮೀಣ ಠಾಣೆಗೆ ಮುತ್ತಿಗೆ ಹಾಕಿದ ಘಟನೆ ನಡೆದಿದೆ.

ಧಾರ್ಮಿಕ ಸ್ಥಳಗಳನ್ನು ಸಂದರ್ಶನ ಮಾಡಿಕೊಂಡು ವಾಪಸ್ ತವರಿನತ್ತ ತೆರಳುತ್ತಿದ್ದಾಗ ಆಕಸ್ಮಿಕವಾಗಿ ಬವಸನದುರ್ಗ (ಕೊರಮ್ಮ ಕ್ಯಾಂಪ್) ಗ್ರಾಮದಲ್ಲಿ ಯಾತ್ರಾರ್ಥಿಗಳಿದ್ದ ವಾಹನವು ಕೇಬಲ್ ವೈರ್​ಗೆ​ ತಗುಲಿತ್ತು. ಇದನ್ನೇ ನೆಪ ಮಾಡಿಕೊಂಡ ಗ್ರಾಮದ ನಾಗರಾಜ್ ಹಾಗೂ ಇತರೆ ಐವರು ಯಾತ್ರಾರ್ಥಿಗಳಿದ್ದ ವಾಹನದ ಮೇಲೆ ದಾಳಿ ಮಾಡಿ, ಗಾಜುಗಳನ್ನು ಪುಡಿಗಟ್ಟಿ, ವಾಹನದಲ್ಲಿದ್ದವರ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿ ಗಂಗಾವತಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಉತ್ತರ ಪ್ರದೇಶದ ಝಾನ್ಸಿ ಜಿಲ್ಲೆಯ ರಾಮಾಜಿ ತಿವಾರಿ ಎಂಬುವರು ನೀಡಿದ ದೂರಿನ ಮೇರೆಗೆ ಬಸವನದುರ್ಗ ಗ್ರಾಮದ ನಾಗರಾಜ್ ಬಾಲಪ್ಪ ಹಾಗೂ ಇತರೆ ಐವರ ವಿರುದ್ಧ ಪ್ರಕರಣ ದಾಖಲಾಗಿದೆ. ಹಲ್ಲೆ ವೇಳೆ ಉತ್ತರ ಪ್ರದೇಶದ ಯಾತ್ರಾರ್ಥಿಗಳಾದ ರಾಮಕುಮಾರ ರಾಮಾಸೀಯಾ ಮತ್ತು ಮೋನು ಬಲರಾಮ್​ ಎಂಬ ಇಬ್ಬರಿಗೆ ಗಾಯಗಳಾಗಿದ್ದು, ಗಂಗಾವತಿ ಉಪ ವಿಭಾಗ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.

ಇದನ್ನೂ ಓದಿ : ಬೆಳಗಾವಿ: ಮಕ್ಕಳು ಹೂ ಕಿತ್ತಿದ್ದಕ್ಕೆ ಅಂಗನವಾಡಿ ಸಹಾಯಕಿಯ ಮೂಗು ಕತ್ತರಿಸಿದ ವ್ಯಕ್ತಿ

ದೂರು ಸ್ವೀಕಾರಕ್ಕೆ ನಕಾರ ಆರೋಪ : ಘಟನೆಗೆ ಸಂಬಂಧಿಸಿದಂತೆ ಆರಂಭದಲ್ಲಿ ದೂರು ಸ್ವೀಕರಿಸಲು ಪೊಲೀಸರು ಮೊದಲಿಗೆ ನಿರಾಕರಿಸಿದ್ದರು ಎಂದು ಐದು ವಾಹನಗಳಲ್ಲಿ ಬಂದ ಯಾತ್ರಾರ್ಥಿಗಳು ದೂರಿದ್ದಾರೆ. ಹೊರ ರಾಜ್ಯದಿಂದ ತೀರ್ಥ ಕ್ಷೇತ್ರಗಳ ದರ್ಶನ, ಯಾತ್ರೆಗೆಂದು ಬರುವ ಜನರಿಗೆ ಸುರಕ್ಷತೆ, ರಕ್ಷಣೆ ಇಲ್ಲದೇ ಹೋದಲ್ಲಿ ಹೇಗೆ ತೀರ್ಥಯಾತ್ರೆ ಕೈಗೊಳ್ಳುವುದು ಎಂದು ಗೈಡ್ ರಾಮಾಜಿ ತಿವಾರಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಇದನ್ನೂ ಓದಿ : ಬೆಳಗಾವಿಯಲ್ಲಿ ಮತ್ತೊಂದು ಅಮಾನವೀಯ ಘಟನೆ: ಮಹಿಳೆ ಅರೆಬೆತ್ತಲೆಗೊಳಿಸಿ ಹಲ್ಲೆ ಆರೋಪ

Last Updated : Jan 3, 2024, 2:02 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.