ಕೊಪ್ಪಳ: ಬಿರುಕು ಬಿಟ್ಟಿದ್ದ ತಾಲೂಕಿನ ಕೋಳೂರು ಬಳಿಯ ಬ್ರಿಡ್ಜ್ ಕಂ ಬ್ಯಾರೇಜ್ನ ತಡೆಗೋಡೆ ಕುಸಿದಿದೆ. ಕಳೆದ ಮೂರ್ನಾಲ್ಕು ದಿನಗಳಿಂದ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಹಿರೇಹಳ್ಳ ಜಲಾಶಯದಿಂದ ಹಳ್ಳಕ್ಕೆ ನೀರು ಬಿಡಲಾಗಿದೆ. ಈ ಸಂದರ್ಭದಲ್ಲಿ ಕೋಳೂರು ಬಳಿ ಇರುವ ಬ್ರಿಡ್ಜ್ ಕಂ ಬ್ಯಾರೇಜ್ನಲ್ಲಿ ನೀರಿನ ರಭಸ ಹೆಚ್ಚಾಗಿ, ಬ್ಯಾರೇಜ್ನ ತಡೆಗೋಡೆ ಹಾಗೂ ಬ್ಯಾರೇಜ್ನ ಪ್ಲಾಟ್ಫಾರ್ಮ್ ಸಹ ಕುಸಿದಿದೆ.
ಕಳೆದ 4 ದಿನಗಳ ಹಿಂದೆ ನೀರಿನ ರಭಸಕ್ಕೆ ಬ್ಯಾರೇಜ್ನ ತಡೆಗೋಡೆ ಮಣ್ಣು ಕುಸಿದಿತ್ತು. ಇಂದು ನೀರಿನ ರಭಸಕ್ಕೆ ತಡೆಗೋಡೆ, ಫ್ಲಾಟ್ ಫಾರ್ಮ್ ಕುಸಿದು ಬಿದ್ದಿದೆ. ಇದರಿಂದ ಬ್ರಿಡ್ಜ್ ಕಂ ಬ್ಯಾರೇಜ್ಗೆ ಅಪಾಯವಾಗುವ ಸಾಧ್ಯತೆ ಇದ್ದು, ಗ್ರಾಮದ ಜನರಲ್ಲಿ ಆತಂಕ ಮೂಡಿಸಿದೆ.
ತಡೆಗೋಡೆ, ಫ್ಲಾಟ್ ಫಾರ್ಮ್ ಕುಸಿದು ಬಿದ್ದಿದ್ದರೂ ಸಹ ಸ್ಥಳಕ್ಕೆ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ಬರದಿರುವುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ. ಐದು ವರ್ಷದ ಹಿಂದೆಯಷ್ಟೇ ಈ ಬ್ರಿಡ್ಜ್ ಕಂ ಬ್ಯಾರೇಜ್ ನಿರ್ಮಾಣವಾಗಿದ್ದು, ಇದು ಕಳಪೆ ಕಾಮಗಾರಿಯಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದರು. ಬ್ಯಾರೇಜ್ನ ತಡೆಗೋಡೆಯಲ್ಲಿ ಬಿರುಕು ಕಾಣಿಸಿಕೊಂಡಿದ್ದ ಕುರಿತು ಈಟಿವಿ ಭಾರತ ವಿಸ್ತೃತ ವರದಿ ಪ್ರಕಟಿಸಿತ್ತು.