ETV Bharat / state

ಕುಷ್ಟಗಿ ರೈತ ಸಂಪರ್ಕ‌ ಕೇಂದ್ರದ ಕೃಷಿ ಅಧಿಕಾರಿ ನಾಪತ್ತೆ - ಕೃಷಿ ಇಲಾಖೆಯ ರೈತ ಸಂಪರ್ಕ ಕೇಂದ್ರ

ಕುಷ್ಟಗಿಯ ಕೃಷಿ ಇಲಾಖೆಯ ರೈತ ಸಂಪರ್ಕ ಕೇಂದ್ರದ ಅಧಿಕಾರಿ ರಾಘವೇಂದ್ರ ಕೊಂಡಗುರಿ ಎಂಬುವರು ಕಳೆದ ಡಿ.1ರಿಂದ ನಾಪತ್ತೆಯಾಗಿದ್ದು, ಈ ಕುರಿತು ಪ್ರಕರಣ ದಾಖಲಾಗಿದೆ.

agriculture officer missing in kushtagi
ರಾಘವೇಂದ್ರ ಕೊಂಡಗುರಿ
author img

By

Published : Dec 7, 2022, 8:14 AM IST

ಕುಷ್ಟಗಿ(ಕೊಪ್ಪಳ): ವೈಯಕ್ತಿಕ ಸಾಲ ಹಾಗೂ ಮಾಹಿತಿ ಹಕ್ಕು ಕಾರ್ಯಕರ್ತರ ಕಿರಿಕಿರಿಗೆ ಬೇಸತ್ತು ಕುಷ್ಟಗಿಯ ಕೃಷಿ ಅಧಿಕಾರಿ ನಾಪತ್ತೆಯಾಗಿರುವ ಪ್ರಕರಣ ಬೆಳಕಿಗೆ ಬಂದಿದೆ. ಕೃಷಿ ಇಲಾಖೆಯ ರೈತ ಸಂಪರ್ಕ ಕೇಂದ್ರದ ಅಧಿಕಾರಿ ರಾಘವೇಂದ್ರ ಕೊಂಡಗುರಿ ಎಂಬುವರು ಕಳೆದ ಡಿ.1 ರಿಂದ ನಾಪತ್ತೆಯಾಗಿದ್ದಾರೆ.

ಮೂಲತಃ ಯಲಬುರ್ಗಾ ತಾಲೂಕಿನ ಹಿರೇಅರಳಹಳ್ಳಿ ಗ್ರಾಮದ ನಿವಾಸಿಯಾದ ರಾಘವೇಂದ್ರ ಕೊಂಡಗುರಿ (37) ಅವರು ಕುಷ್ಟಗಿ ರೈತ ಸಂಪರ್ಕ ಕೇಂದ್ರದಲ್ಲಿ ಕೃಷಿ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದರು. ಕಳೆದ ಡಿ.1 ರಂದು ಬೆಳಗ್ಗೆ 10 ಗಂಟೆಗೆ ಕಚೇರಿ ಕೆಲಸಕ್ಕೆಂದು ಮನೆಯಿಂದ ನಿರ್ಗಮಿಸಿದವರು ವಾಪಸ್​ ಬಂದಿಲ್ಲ. ಡಿ.6 ರಂದು ಕುಷ್ಟಗಿ ಪೊಲೀಸ್ ಠಾಣೆಯಲ್ಲಿ ಕಾಣೆಯಾಗಿರುವ ಕುರಿತು ದೂರು ನೀಡಲಾಗಿದೆ ಎಂದು ಪತ್ನಿ ವಿದ್ಯಾಶ್ರೀ ಕೊಂಡಗುರಿ ತಿಳಿಸಿದ್ದಾರೆ.

ಸದರಿ ದೂರಿನಲ್ಲಿ ಡಿ.1ರಂದು ಅವರ ಪರಿಚಯಸ್ಥ ಹನುಮೇಶ ಕೊಂಡಗುರಿ ಅವರ ಬೈಕ್​ನಲ್ಲಿ ಬಸ್ ನಿಲ್ದಾಣದವರೆಗೂ‌ ಬಂದಿದ್ದಾರೆ. ಅಲ್ಲಿಂದ ಕಚೇರಿಗೆ ಹೋಗದೆ ನಾಪತ್ತೆಯಾಗಿದ್ದಾರೆ. ಕಾಣೆಯಾದ ಸಂದರ್ಭದಲ್ಲಿ ಕಪ್ಪು ಬಣ್ಣದ ನೈಟ್ ಪ್ಯಾಂಟ್, ಕಪ್ಪು ಟೀ ಶರ್ಟ್​, ಬ್ರೌನ್ ಕಲರ್ ಜರ್ಕಿನ್ ಧರಿಸಿದ್ದಾರೆ. 6 ಅಡಿ ಎತ್ತರ, ದುಂಡು ಮುಖ, ಗೋಧಿ ಮೈಬಣ್ಣ, ಸಾಧಾರಣ ಮೈಕಟ್ಟು ಹೊಂದಿದ್ದು, ಕನ್ನಡ, ಹಿಂದಿ, ಇಂಗ್ಲಿಷ್ ಮಾತನಾಡುತ್ತಾರೆಂದು ದೂರಿನಲ್ಲಿ ವಿವರಿಸಲಾಗಿದೆ.

ಇದನ್ನೂ ಓದಿ: ಅಪರಿಚಿತ ವಾಹನ ಡಿಕ್ಕಿ: ಸಾವನ್ನಪ್ಪಿದ ಇಬ್ಬರು ಕೃಷಿ ಇಲಾಖೆ ಅಧಿಕಾರಿಗಳು

ರಾಘವೇಂದ್ರ ಕೊಂಡಗುರಿ ಅವರು ಮನೆಯಿಂದ ಹೋಗುವಾಗ ಎರಡು ಮೊಬೈಲ್ ಬಿಟ್ಟು ಹೋಗಿದ್ದಾರೆ. ಕಳೆದ ನಾಲ್ಕೈದು ದಿನಗಳಿಂದ ಅನಧಿಕೃತ ಗೈರು ಆಗಿರುವ ಹಿನ್ನೆಲೆಯಲ್ಲಿ ಪಿಎಸ್​ಐ ಮೌನೇಶ್​ ರಾಠೋಡ್ ಪ್ರಕರಣ ದಾಖಲಿಸಿಕೊಂಡಿದ್ದು, ಸದರಿ ಅಧಿಕಾರಿ‌ ಪತ್ತೆಗೆ ಕ್ರಮವಹಿಸಲಾಗಿದೆ ಎಂದು ಸಿಪಿಐ ನಿಂಗಪ್ಪ ರುದ್ರಪ್ಪಗೋಳ ತಿಳಿಸಿದ್ದಾರೆ.

ಇದನ್ನೂ ಓದಿ: ಬಿತ್ತನೆ ಬೀಜ, ರಸಗೊಬ್ಬರ, ಕೀಟನಾಶಕ ಅಕ್ರಮ: ಕಡಿವಾಣಕ್ಕೆ ಸರ್ಕಾರದ ಹೊಸ ಅಸ್ತ್ರವೇನು?

ETV Bharat Logo

Copyright © 2025 Ushodaya Enterprises Pvt. Ltd., All Rights Reserved.