ಗಂಗಾವತಿ: ಸರ್ಕಾರಿ ರಜೆ ನಡುವೆಯೂ ಲಾಕ್ಡೌನ್ ಉಲ್ಲಂಘಿಸಿ ತಾಲೂಕಿನ ಮೂಸ್ಟೂರು ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿ ಸದಸ್ಯರು ಸಭೆ ನಡೆಸಿರುವುದು ಬೆಳಕಿಗೆ ಬಂದಿದೆ.
ಶನಿವಾರ ರಜೆ ಇದ್ದರೂ ಕೂಡ ಅಧ್ಯಕ್ಷ ಅಂಜಿನಪ್ಪ, ಸಂಘದ ಸದಸ್ಯರು, ಕಾರ್ಯದರ್ಶಿ ಪ್ರಶಾಂತ ಎಂಬುವವರ ನೇತೃತ್ವದಲ್ಲಿ ಕಚೇರಿಯ ಬಾಗಿಲು ಹಾಕಿ ಒಳಗೆ ಸಭೆ ನಡೆಸಿದ್ದು, ಸಂಘದ ಚಟುವಟಿಕೆಗೆ ಸಂಬಂಧಿಸಿದಂತೆ ಕೆಲ ಠರಾವು ಪಾಸು ಮಾಡಿದ್ದಾರೆ ಎನ್ನಲಾಗಿದೆ. ಇದು ಗ್ರಾಮದ ನಾಗರಿಕರಲ್ಲಿ ಹಲವು ಅನುಮಾನಕ್ಕೆ ಕಾರಣವಾಗಿದೆ.
ಆಡಳಿತ ಮಂಡಳಿಯ ಈ ಕ್ರಮವನ್ನು ಪ್ರಶ್ನಿಸಿ ಇದೀಗ ಗ್ರಾಮದ ಕೆಲ ಯುವಕರು ಜಿಲ್ಲಾಧಿಕಾರಿ, ಸಹಕಾರ ಇಲಾಖೆಯ ಸಹಾಯಕ ನಿಬಂಧಕ ಹಾಗೂ ಕಾರಟಗಿಯ ತಹಶೀಲ್ದಾರ್ ಸೇರಿದಂತೆ ನಾನಾ ಇಲಾಖೆಯ ಅಧಿಕಾರಿಗಳಿಗೆ ದೂರು ನೀಡಿದ್ದಾರೆ.