ETV Bharat / state

ಕೊಪ್ಪಳ ರಸ್ತೆಗಳಲ್ಲಿ ಬಿಡಾಡಿ ದನಗಳ ಹಾವಳಿ... ವಾಹನ ಸವಾರರಿಗೆ ಆತಂಕ

ಕೊಪ್ಪಳ ನಗರದಲ್ಲಿ ಇಷ್ಟು ದಿನ ತುಸು ಕಡಿಮೆಯಾಗಿದ್ದ ಬಿಡಾಡಿ ದನಗಳ ಹಾವಳಿ ಈಗ ಮತ್ತೆ ಶುರುವಾಗಿದೆ. ನಗರದ ಪ್ರಮುಖ ರಸ್ತೆ ಸೇರಿದಂತೆ ಇನ್ನಿತರೆ ರಸ್ತೆಗಳಲ್ಲಿ ಈ ಬಿಡಾಡಿಗಳ ದನಗಳಿಂದಾಗಿ ಸಾರ್ವಜನಿಕರು ನಿತ್ಯವೂ ತೊಂದರೆ ಅನುಭವಿಸುತ್ತಿದ್ದಾರೆ.

ಕೊಪ್ಪಳ ರಸ್ತೆಗಳಲ್ಲಿ ಮತ್ತೆ ಹೆಚ್ಚಾಯ್ತು ಬಿಡಾಡಿ ದನಗಳ ಹಾವಳಿ
author img

By

Published : Sep 6, 2019, 7:29 PM IST

ಕೊಪ್ಪಳ: ನಗರದಲ್ಲಿ ಇಷ್ಟು ದಿನ ತುಸು ಕಡಿಮೆಯಾಗಿದ್ದ ಬಿಡಾಡಿ ದನಗಳ ಹಾವಳಿ ಈಗ ಮತ್ತೆ ಶುರುವಾಗಿದೆ. ನಗರದ ಪ್ರಮುಖ ರಸ್ತೆ ಸೇರಿದಂತೆ ಇನ್ನಿತರೆ ರಸ್ತೆಗಳಲ್ಲಿ ಈ ಬಿಡಾಡಿಗಳ ದನಗಳಿಂದಾಗಿ ಸಾರ್ವಜನಿಕರು ನಿತ್ಯವೂ ತೊಂದರೆ ಅನುಭವಿಸುವಂತಾಗಿದೆ.

ಕೊಪ್ಪಳ ರಸ್ತೆಗಳಲ್ಲಿ ಮತ್ತೆ ಹೆಚ್ಚಾಯ್ತು ಬಿಡಾಡಿ ದನಗಳ ಹಾವಳಿ
ನಗರದಲ್ಲಿ ಇದೀಗ ಎಲ್ಲೆಂದರಲ್ಲಿ ಹಿಂಡುಗಟ್ಟಲೇ ಬಿಡಾಡಿ ದನಗಳು ಕಾಣುತ್ತಿದ್ದು, ಪ್ರಮುಖ ರಸ್ತೆಗಳಲ್ಲಿ ರಾಜಾರೋಷವಾಗಿ ಓಡಾಡುತ್ತಿವೆ. ಒಂದು ಮಾಹಿತಿಯ ಪ್ರಕಾರ ಈ ದನಗಳಿಗೆ ಮಾಲೀಕರು ಇದ್ದಾರೆ. ಅವರೇ ಇವುಗಳನ್ನು ನಗರದಲ್ಲಿ‌ ಮೇಯಲು ಬಿಡುತ್ತಿದ್ದಾರೆ. ಸಣ್ಣ ಸಣ್ಣ ಕರುಗಳೊಂದಿಗೆ ನಗರದ ಮುಖ್ಯರಸ್ತೆ, ಜವಾಹರ ರಸ್ತೆ ಸೇರಿದಂತೆ ಅನೇಕ ರಸ್ತೆಗಳಲ್ಲಿ ಇವು ಕಂಡುಬರುತ್ತಿದ್ದು, ವಾಹನ ಸವಾರರು ಭಯದಲ್ಲಿಯೇ ವಾಹನ ಚಲಾಯಿಸಿಕೊಂಡು ಹೋಗಬೇಕಿದೆ. ಕೆಲವೊಮ್ಮೆ ಈ ಬಿಡಾಡಿ ದನಗಳು ಗುದ್ದಾಡುತ್ತಾ, ರಸ್ತೆಯಲ್ಲಿ ಓಡಾಡಿದರೆ ಇನ್ನೊಂದು ಕಡೆ ಬಿಡಾಡಿ ದನಗಳು ರಸ್ತೆಯಲ್ಲಿ ಮಲಗಿಕೊಂಡಿರುತ್ತವೆ. ಹೀಗಾಗಿ ವಾಹನ ಸವಾರರಿಗೆ ಪ್ರಾಣಭಯ ಕಾಡುತ್ತಿದೆ.

ಇನ್ನು ಪಾದಚಾರಿಗಳು ಸಹ ಆತಂಕ ಎದುರಿಸುವಂತಾಗಿದೆ. ಅಲ್ಲದೇ ಕೆಲವೊಮ್ಮೆ ಬೈಕ್ ಸವಾರರು ಬಿದ್ದು ಗಾಯಗೊಂಡಿರುವ ಉದಾಹರಣೆಗಳಿವೆ. ಹೀಗಾಗಿ, ನಗರದ ಪ್ರಮುಖ ಕೆಲ ರಸ್ತೆಗಳಲ್ಲಿ ವಾಹನ ಚಲಾಯಿಸೋದು ಒಂದು ರೀತಿಯಲ್ಲಿ ಹರಸಾಹಸ ಎನ್ನುವಂತಾಗಿದೆ.

Intro:

Body:ಕೊಪ್ಪಳ:-ನಗರದಲ್ಲಿ ಇಷ್ಟು ದಿನ ತುಸು ಕಡಿಮೆಯಾಗಿದ್ದ ಬಿಡಾಡಿ ದನಗಳ ಹಾವಳಿ ಈಗ ಮತ್ತೆ ಶುರುವಾಗಿದೆ. ನಗರದ ಪ್ರಮುಖ ರಸ್ತೆ ಸೇರಿದಂತೆ ಇನ್ನಿತರೆ ರಸ್ತೆಗಳಲ್ಲಿ ಈ ಬಿಡಾಡಿಗಳ ದನಗಳಿಂದಾಗಿ ಹಾವಳಿಯಿಂದಾಗು ಸಾರ್ವಜನಿಕರು ತೊಂದರೆ ಅನಭವಿಸುವಂತಾಗಿದೆ.

ಹೌದು...,ನಗರದಲ್ಲಿ ಬಿಡಾಡಿ ದನಗಳ ಹಾವಳಿ ಚಲೀಗ ವಿಪರೀತವಾಗಿದೆ‌. ಎಲ್ಲೆಂದರಲ್ಲಿ ಹಿಂಡುಗಟ್ಟಲೆ ಬಿಡಾಡಿ ದನಗಳು ಕಾಣುತ್ತಿದ್ದು ಪ್ರಮುಖ ರಸ್ತೆಗಳಲ್ಲಿ ರಾಜಾರೋಷವಾಗಿ ಓಡಾಡುತ್ತಿವೆ. ಒಂದು ಮಾಹಿತಿಯ ಪ್ರಕಾರ ಈ ಬಿಡಾಡಿ ದನಗಳಿಗೆ ಮಾಲೀಕರು ಇದ್ದಾರೆ. ಅವುಗಳನ್ನು ನಗರದಲ್ಲಿ‌ ಮೇಯಲು ಬಿಡುತ್ತಾರೆ. ಅವು ಮೇಯ್ದುಕೊಂಡು ರಾತ್ರಿ ವೇಳೆಗೆ ಮನೆಗೆ ಹೋಗುತ್ತವಂತೆ. ಸಣ್ಣ ಸಣ್ಣ ಕರುಗಳೊಂದಿಗೆ ನಗರದ ಮುಖ್ಯರಸ್ತೆ, ಜವಾಹರ ರಸ್ತೆ ಸೇರಿದಂತೆ ಅನೇಕ ರಸ್ತೆಗಳಲ್ಲಿ ಇವು ಕಂಡುಬರುತ್ತಿದ್ದು ವಾಹನ ಸವಾರರು ಭಯದಲ್ಲಿಯೇ ವಾಹನ ಚಲಾಯಿಸಿಕೊಂಡು ಹೋಗಬೇಕಿದೆ. ಕೆಲವೊಮ್ಮೆ ಈ ಬಿಡಾಡಿ ದನಗಳು ಗುದ್ದಾಡುತ್ತಾ ರಸ್ತೆಯಲ್ಲಿ ಓಡಾಡಿದರೆ ಇನ್ನೊಂದು ಕಡೆ ಬಿಡಾಡಿ ದನಗಳು ರಸ್ತೆಯಲ್ಲಿ ಮಲಗಿಕೊಂಡಿರುತ್ತವೆ. ಇದರಿಂದಾಗಿ ವಾಹನ ಸವಾರರರು ಭಯದಿಂದಲೇ ಸಾಗಬೇಕಿದೆ. ಇನ್ನು ಪಾದಚಾರಿಗಳು ಸಹ ಈ ಬಿಡಾಡಿ ದನಗಳಿಂದ ಭಯಪಡುವಂತಾಗಿದೆ. ರಸ್ತೆಯಲ್ಲಿ ಎಲ್ಲೆಂದರಲ್ಲಿ ಬಿಡಾಡಿ ದನಗಳು ಓಡಾಡುತ್ತಿರೋದ್ರಿಂದ ಕೆಲವೊಮ್ಮೆ ಬೈಕ್ ಸವಾರರು ಬಿದ್ದು ಗಾಯಗೊಂಡಿರುವ ಉದಾಹರಣೆಗಳಿವೆ. ಹೀಗಾಗಿ, ನಗರದ ಪ್ರಮುಖ ಕೆಲ ರಸ್ತೆಗಳಲ್ಲಿ ವಾಹನ ಚಲಾಯಿಸೋದು ಒಂದು ರೀತಿಯಲ್ಲಿ ಸಾಹಸ ಎನ್ನುವಂತಾಗಿದೆ. ಬಿಡಾಡಿ ದನಗಳಿಗೆ ಕಡಿವಾಣ ಹಾಕುವಂತೆ ಈ ಹಿಂದೆ ನಾಗರಿಕರು ನಗರಸಭೆಗೆ ಸಾಕಷ್ಟು ಬಾರಿ ಮನವಿ ಮಾಡಿದ್ದರು. ನೆಪಮಾತ್ರಕ್ಕೆ ಎಂಬಂತೆ ಒಂದಿಷ್ಟು ಬಿಡಾಡಿ ದನಗಳನ್ನು ಕಂಟ್ರೋಲ್ ಮಾಡಲಾಗಿತ್ತು. ಈಗ ಮತ್ತೆ ಬಿಡಾಡಿ ದನಗಳ ಹಾವಳಿ ಹೆಚ್ಚಾಗಿದೆ. ಕನಿಷ್ಠ ಮೂರರಿಂದ ೧೦ ದನಗಳ ಗುಂಪು ನಗರದ ಪ್ರಮುಖ ರಸ್ತೆಗಳಲ್ಲಿ ಕಂಡು ಬರುತ್ತಿವೆ. ರಸ್ತೆಯಲ್ಲಿ‌ ಮಲಗಿರುವ ದನಗಳು ಎಷ್ಟೆ ಸೌಂಡ್ ಮಾಡಿದರೂ ಅಲ್ಲಿಂದ ಜಪ್ಪಯ್ಯ ಎನ್ನುವುದಿಲ್ಲ. ಕೆಲವೊಮ್ಮೆ ಈ ಬಿಡಾಡಿ ದನಗಳ ಪ್ರಾಣಕ್ಕೂ ಅಪಾಯ ಎದುರಾಗುವ ಸಾಧ್ಯತೆ ಇದ್ದು ಜನರ ಹಾಗೂ ಆ ಬಿಡಾಡಿ ದನಗಳ ಸುರಕ್ಷೆಯ ದೃಷ್ಠಿಯಿಂದ ಈ ಬಿಡಾಡಿ ದನಗಳನ್ನು ನಿಯಂತ್ರಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಬೈಟ್1:- ಹುಸೇನ್ ಪಾಷಾ, ಸ್ಥಳೀಯರು.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.