ಗಂಗಾವತಿ: ಜಿಲ್ಲೆಯಲ್ಲಿ ಕೋವಿಡ್ ಸೋಂಕಿತರ ಪ್ರಮಾಣ ಹೆಚ್ಚಳವಾಗುತ್ತಿದ್ದು ಜಿಲ್ಲಾಸ್ಪತ್ರೆ ಹಾಗೂ ಗಂಗಾವತಿಯ ತಾಲೂಕು ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಬೆಡ್ ಕೊರತೆ ಉಂಟಾಗುತ್ತಿದೆ. ಇದಕ್ಕೆ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಲಾಗುತ್ತಿದೆ ಎಂದು ಶಾಸಕ ಬಸವರಾಜ ದಢೇಸೂಗೂರು ತಿಳಿಸಿದರು.
ಜಮಾಪುರದ ಬಳಿ ಇರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ 100 ಬೆಡ್ಗಳ ಕೋವಿಡ್ ಕೇರ್ ಸೆಂಟರ್ಗೆ ಭೇಟಿ ನೀಡಿ, ಬಳಿಕ ಮಾತನಾಡಿದ ಶಾಸಕರು, ಬೆಡ್ ಕೊರತೆಗೆ ಪರ್ಯಾಯವಾಗಿ ಕಾರಟಗಿ ಹಾಗೂ ಶ್ರೀರಾಮನಗರದಲ್ಲಿ ತಲಾ 30 ಬೆಡ್ಗಳ ಕೋವಿಡ್ ಕೇಂದ್ರ ಆರಂಭಿಸಲಾಗುವುದು.
ಆಕ್ಸಿಜನ್ ಸಹಿತ 60 ಬೆಡ್ ನಿರ್ಮಾಣವಾದರೆ ಕಾರಟಗಿ, ಕನಕಗಿರಿ ಭಾಗದ ಜನರು ನಡೆಸುತ್ತಿರುವ ಪರದಾಟ ಕೊಂಚ ಮಟ್ಟಿಗೆ ತಗ್ಗಲಿದೆ. ಈ ಬಗ್ಗೆ ಜಿಲ್ಲಾಧಿಕಾರಿಯೊಂದಿಗೆ ಚರ್ಚಿಸಿ ಶೀಘ್ರ ಜಾರಿಗೆ ತರಲಾಗುವುದು ಎಂದರು.