ಕೊಪ್ಪಳ : ಜಿಲ್ಲೆಯ ಕುಕನೂರು ತಾಲೂಕಿನ ಭಾನಾಪುರ ಬಳಿ ಸ್ಥಾಪನೆಯಾಗುತ್ತಿರುವ ಏಕಸ್ ಕಂಪನಿಯ ಆಟಿಕೆ ವಸ್ತುಗಳ ಕೈಗಾರಿಕೆಗೆ ನಾಳೆ ಭೂಮಿ ಪೂಜೆ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಸಿಎಂ ಯಡಿಯೂರಪ್ಪ ಭಾಗವಹಿಸಲಿದ್ದಾರೆ ಎಂದು ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಾಳ್ಕರ್ ತಿಳಿಸಿದ್ದಾರೆ.
ಓದಿ: ಏಕಸ್ ಆಟಿಕೆ ವಸ್ತುಗಳ ಕೈಗಾರಿಕೆಗೆ ಭೂಮಿ ಪೂಜೆ ನಾಳೆ; ಕಾರ್ಯಕ್ರಮದಲ್ಲಿ ಸಿಎಂ ಭಾಗಿ
ಸಿಎಂ ಆಗಮನದ ಹಿನ್ನೆಲೆ, ಭಾನಾಪುರ ಬಳಿ ಸ್ಥಳ ಪರಿಶೀಲನೆ ನಡೆಸಿದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕಾರ್ಯಕ್ರಮ ನಡೆಯುವ ಈ ಸ್ಥಳದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡು ಸುಮಾರು ಒಂದು ಸಾವಿರ ಜನ ಕುಳಿತುಕೊಳ್ಳಲು ಆಸನದ ವ್ಯವಸ್ಥೆ ಮಾಡಲಾಗಿದೆ.
ಸ್ಯಾನಿಟೈಸರ್ ಬಳಕೆ, ಸಾಮಾಜಿಕ ಅಂತರ ಕಾಪಾಡುವುದು ಹಾಗೂ ಕಡ್ಡಾಯವಾಗಿ ಮಾಸ್ಕ್ ಧರಿಸುವುದು ಸೇರಿ ಕೋವಿಡ್ ನಿಯಮಗಳನ್ನು ಪಾಲನೆ ಮಾಡಲು ಸೂಚನೆ ನೀಡಲಾಗಿದೆ ಎಂದರು.
ಓದಿ: ಉ.ಕ. ಭಾಗದ ಕೈಗಾರಿಕರಣಕ್ಕೆ ಶುಕ್ರದೆಸೆ: ಏಕಸ್ ಕಂಪನಿ ಸ್ಥಾಪನೆಗೆ ಗ್ರೀನ್ ಸಿಗ್ನಲ್, 30 ಸಾವಿರ ಉದ್ಯೋಗ ಸೃಷ್ಟಿ!
ಬಿಗಿ ಬಂದೂಬಸ್ತ್:
ಜಿಲ್ಲೆಯ ಕುಕನೂರು ಬಳಿ ನಾಳೆ ಏಕಸ್ ಸಂಸ್ಥೆಯ ಆಟಿಕೆ ವಸ್ತುಗಳ ತಯಾರಿಕಾ ಘಟಕದ ಭೂಮಿಪೂಜೆಗೆ ಸಿಎಂ ಯಡಿಯೂರಪ್ಪ ಆಗಮಿಸುತ್ತಿರುವ ಹಿನ್ನೆಲೆ, ಜಿಲ್ಲಾ ಪೊಲೀಸ್ ಇಲಾಖೆ ಬಿಗಿ ಬಂದೋಬಸ್ತ್ ಏರ್ಪಡಿಸಿದೆ. ಬೆಳಗ್ಗೆ 10 ಗಂಟೆಯ ವೇಳೆಗೆ ಸಿಎಂ ಯಡಿಯೂರಪ್ಪ ಅವರು ಬಸಾಪುರ ಬಳಿಯ ಖಾಸಗಿ ಏರ್ಪೋರ್ಟ್ ಗೆ ಬಂದಿಳಿದು ಅಲ್ಲಿಂದ ರಸ್ತೆ ಮಾರ್ಗದ ಮೂಲಕ ಭಾನಾಪುರ ಬಳಿಯ ಕಾರ್ಯಕ್ರಮ ನಡೆಯುವ ಸ್ಥಳಕ್ಕೆ ಆಗಮಿಸುವರು.
ಸಿಎಂ ಆಗಮನದ ಹಿನ್ನೆಲೆ, ಸಾಕಷ್ಟು ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಒಬ್ಬರು ಎಸ್ಪಿ, ನಾಲ್ವರು ಡಿಎಸ್ಪಿ, 10 ಪಿಐ, 35 ಪಿಎಸ್ಐ ಸೇರಿದಂತೆ ಒಟ್ಟು ಸುಮಾರು 600 ಜನ ಸಿಬ್ಬಂದಿಯನ್ನು ಬಂದೋಬಸ್ತ್ ಕರ್ತವ್ಯಕ್ಕೆ ನಿಯೋಜಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾಧಿಕಾರಿ ಟಿ. ಶ್ರೀಧರ ಅವರು ತಿಳಿಸಿದ್ದಾರೆ.