ETV Bharat / state

ಬೈಕ್​-ಕಾರಿನ ನಡುವೆ ಅಪಘಾತ: ಮೂವರ ಸ್ಥಿತಿ ಗಂಭೀರ - ಕೊಪ್ಪಳದ ಗಂಗಾವತಿಯಲ್ಲಿ ಅಪಘಾತ

ಕಾರು ಮತ್ತು ಬೈಕ್​ ನಡುವೆ ಡಿಕ್ಕಿ ಸಂಭವಿಸಿ ಮೂವರು ಗಾಯಗೊಂಡ ಘಟನೆ ಗಂಗಾವತಿ ನಗರದ ಹೊರವಲಯದಲ್ಲಿ ನಡೆದಿದೆ.

Accident between car and Bike near Gangavati
ಗಂಗಾವತಿಯಲ್ಲಿ ಕಾರು ಬೈಕ್ ನಡುವೆ ಅಪಘಾತ
author img

By

Published : Nov 27, 2020, 9:32 PM IST

ಗಂಗಾವತಿ: ನಗರದ ಹೊರವಲಯದ ಕೃಷಿ ವಿಜ್ಞಾನ ಹಾಗೂ ಸಂಶೋಧನಾ ಕೇಂದ್ರದ ಸಮೀಪ ಸ್ವಿಫ್ಟ್ ಕಾರು ಹಾಗೂ ಬೈಕ್ ನಡುವೆ ನಡೆದ ಅಪಘಾತದಲ್ಲಿ ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಕಾರಟಗಿ ತಾಲೂಕಿನ ಹಗೇದಾಳ ಗ್ರಾಮದ ಮೌಲಸಾಬ್ (28), ಲಿಂಗಪ್ಪ (27) ಹಾಗೂ ಅರವಿಂದ (32) ಗಾಯಾಳುಗಳು. ಇವರನ್ನು ನಗರದ ಉಪವಿಭಾಗ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಅಪಘಾತದಲ್ಲಿ ಒಬ್ಬನ ಕಾಲು ಮುರಿದಿದ್ದು, ಮತ್ತೊಬ್ಬನ ತಲೆಗೆ ಗಂಭೀರ ಗಾಯವಾಗಿದೆ ಹಾಗೂ ಇನ್ನೊಬ್ಬನ ಕೈ ಮತ್ತು ದೇಹದ ಒಳಭಾಗದಲ್ಲಿ ಪೆಟ್ಟಾಗಿದೆ. ಗಾಯಳುಗಳ ಪೈಕಿ ಓರ್ವನನ್ನು ಜಿಲ್ಲಾಸ್ಪತ್ರೆಗೆ ಸಾಗಿಸಲಾಗಿದೆ.

ಬೈಕ್​ ಸವಾರರು ಗಂಗಾವತಿಯಿಂದ ಹೇರೂರು ಮಾರ್ಗವಾಗಿ ತೆರಳುತಿದ್ದಾಗ ಬಲ ಭಾಗದಿಂದ ಬಂದ ಕಾರು ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ಕಾರು ಮತ್ತು ಬೈಕ್ ಸಂಪೂರ್ಣ ಜಖಂಗೊಂಡಿವೆ. ಈ ಕುರಿತು ಸಂಚಾರಿ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.