ETV Bharat / state

ರೋಗಿಯಿಂದ ₹6 ಸಾವಿರ ಲಂಚ ಪಡೆಯುತ್ತಿದ್ದ ಸರ್ಕಾರಿ ವೈದ್ಯ ಎಸಿಬಿ ಬಲೆಗೆ - ACB trap of a government doctor who received bribe from a patient

ಚಿಕಿತ್ಸೆ ಪೂರ್ವದಲ್ಲಿ 6 ಸಾವಿರ ಹಣ ನೀಡಲಾಗಿತ್ತು. ಶನಿವಾರ ಡಿಸ್ಚಾರ್ಜ್​ ಮಾಡುವ ವೇಳೆ ಬಾಕಿ 6 ಸಾವಿರ ಪಡೆದುಕೊಳ್ಳುವಾಗ ಎಸಿಬಿ ಅಧಿಕಾರಿಗಳು ದಾಳಿ ಮಾಡಿದ್ದಾರೆ.

government-doctor
ಸರ್ಕಾರಿ ವೈದ್ಯ ಎಸಿಬಿ ಬಲೆಗೆ
author img

By

Published : Jan 22, 2022, 8:18 PM IST

ಗಂಗಾವತಿ: ಇಲ್ಲಿನ ಉಪವಿಭಾಗ ಸರ್ಕಾರಿ ಆಸ್ಪತ್ರೆಯ ಎಲುಬು ಮತ್ತು ಕೀಲು ತಜ್ಞವೈದ್ಯ ಸಲಾವುದ್ದೀನ್, ರೋಗಿಯೊಬ್ಬರಿಂದ ಲಂಚ ಸ್ವೀಕರಿಸುತ್ತಿರುವ ವೇಳೆ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ.

ರೋಗಿಯೊಬ್ಬರಿಗೆ ಚಿಕಿತ್ಸೆ ನೀಡುವ ಸಂಬಂಧ ಸಲಾವುದ್ದೀನ್​ ಅವರು 12 ಸಾವಿರ ರೂಪಾಯಿ ಮೊತ್ತದ ಲಂಚ ಕೇಳಿದ್ದರು ಎನ್ನಲಾಗ್ತಿದೆ. ಈ ಪೈಕಿ ಕೊನೆಯ ಕಂತು 6 ಸಾವಿರ ಹಣವನ್ನು ತಮ್ಮ ಸಹಾಯಕ ವೀರೇಶ್​ ಎಂಬುವರಿಂದ ಸಂಗ್ರಹಿಸುತ್ತಿದ್ದ ವೇಳೆ ಎಸಿಬಿ ಬಲೆ ಬೀಸಿತ್ತು.

ಘಟನೆಯ ವಿವರ: ವಡ್ಡರಹಟ್ಟಿ ಗ್ರಾಮದ ನಾಗಪ್ಪ ಎಂಬುವವರು ಮೂಳೆ ಸಂಬಂಧಿತ ಸಮಸ್ಯೆಯಿಂದ ಬಳುತ್ತಿದ್ದರು. ಇವರನ್ನು ಕೃಷ್ಣಕಿಶೋರ್ ಎಂಬುವರು ಚಿಕಿತ್ಸೆಗಾಗಿ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿದ್ದರು. ಚಿಕಿತ್ಸೆ ನೀಡಲು ವೈದ್ಯ ಸಲಾವುದ್ದೀನ್ 12 ಸಾವಿರ ರೂಪಾಯಿ ಬೇಡಿಕೆ ಇಟ್ಟಿದ್ದರು ಎನ್ನಲಾಗ್ತಿದೆ.

ಹೀಗಾಗಿ ಚಿಕಿತ್ಸೆ ಪೂರ್ವದಲ್ಲಿ 6 ಸಾವಿರ ಹಣ ನೀಡಲಾಗಿತ್ತು. ಶನಿವಾರ ಡಿಸ್ಚಾರ್ಜ್​ ಮಾಡುವ ವೇಳೆ ಬಾಕಿ 6 ಸಾವಿರ ಪಡೆದುಕೊಳ್ಳುವಾಗ ಎಸಿಬಿ ಅಧಿಕಾರಿಗಳು ದಾಳಿ ಮಾಡಿದ್ದಾರೆ. ವೈದ್ಯರು ಚಿಕಿತ್ಸೆಗಾಗಿ ಇಷ್ಟು ಪ್ರಮಾಣದ ಹಣದ ಬೇಡಿಕೆ ಇಟ್ಟ ಬಗ್ಗೆ ಕೃಷ್ಣಕಿಶೋರ್ ಈ ಮೊದಲೇ ಎಸಿಬಿ ಗಮನಕ್ಕೆ ತಂದಿದ್ದರು. ಇದರಂತೆ ಯೋಜನೆ ರೂಪಿಸಿ ವೈದ್ಯರನ್ನು ಎಸಿಬಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

ಇದನ್ನೂ ಓದಿ: ಕಾಪು ಕಾಂಗ್ರೆಸ್ ಮುಖಂಡೆ ರೀನಾ ಡಿಸೋಜಾರಿಗೆ ಚೂರಿಯಿಂದ ಇರಿತ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.