ಗಂಗಾವತಿ : ನಗರದ ಪ್ರತಿಷ್ಠಿತ ಹೊಟೇಲ್ ಮೇಲೆ ದಾಳಿ ಮಾಡಿದ ಸಹಾಯಕ ಆಯಕ್ತ ನಾರಾಯಣ ಕನಕರೆಡ್ಡಿ ಹಾಗೂ ಕೊಪ್ಪಳದ ನಗರ ಯೋಜನಾ ಕೋಶದ ಯೋಜನಾ ನಿರ್ದೇಶಕ ಸಿದ್ದರಾಮ ಗ್ರಾಹಕರು ಸೇರಿದಂತೆ ಮಾಲೀಕರಿಗೆ ದಂಡ ವಿಧಿಸಿ ಎಚ್ಚರಿಕೆ ನೀಡಿದರು.
ನಗರದ ನೀಲಕಂಠೇಶ್ವರ ವೃತ್ತದಲ್ಲಿರುವ 'ಕೃಷ್ಣ ವೆಜ್' ಹೋಟೆಲ್ ಮೇಲೆ ದಾಳಿ ಮಾಡಿದ ಅಧಿಕಾರಿಗಳು, ಮಾಸ್ಕ್ ಇಲ್ಲದಿರುವ ಗ್ರಾಹಕರನ್ನು ಹೊಟೇಲ್ ಒಳಗೆ ಬಿಟ್ಟುಕೊಂಡಿದ್ದಕ್ಕೆ ಮಾಲೀಕರಿಗೆ ಹಾಗೂ ಮಾಸ್ಕ್ ಇಲ್ಲದೇ ಹೋಟೆಲ್ ಪ್ರವೇಶ ಮಾಡಿದ ಗ್ರಾಹಕರಿಂದ ದಂಡ ಕಟ್ಟಿಸಿದರು.
ಮಾಸ್ಕ್ ಇಲ್ಲದವರನ್ನು ಗಮನಿಸಿದ ಅಧಿಕಾರಿಗಳು ಸ್ಥಳಕ್ಕೆ ಪೊಲೀಸರನ್ನು ಕರೆಯಿಸಿಕೊಂಡು ದಂಡ ಹಾಕಿಸಿದರು. ಹೊಟೇಲ್‌ಗೆ ಬರುವ ಗ್ರಾಹಕರಿಗೆ ಕಡ್ಡಾಯವಾಗಿ ಮಾಸ್ಕ್ ಇರಬೇಕು, ಇಲ್ಲವಾದಲ್ಲಿ ಅವಕಾಶ ನೀಡಬೇಡಿ. ಇದು ಮೊದಲ ಎಚ್ಚರಿಕೆ. ಎರಡನೇ ಬಾರಿ ಪುನರಾವರ್ತನೆಯಾದರೆ ಹೊಟೇಲ್ ಮಾನ್ಯತೆ ರದ್ದು ಮಾಡುವುದಾಗಿ ಅಧಿಕಾರಿಗಳು ಎಚ್ಚರಿಕೆ ನೀಡಿದರು.