ಗಂಗಾವತಿ: ಭಾನುವಾರದ ದಿನ ಈ ಯುವಕ ಯುವಕ ನಗರದ ಸಾರ್ವಜನಿಕ ಸ್ಥಳದಲ್ಲಿರುವ ಮರ-ಗಿಡಗಳಿಗೆ ನೀರುಣಿಸುವ ಮೂಲಕ ಪರಿಸರ ಸಂರಕ್ಷಣೆಗೆ ಅಳಿಲು ಸೇವೆ ನೀಡುತ್ತಿದ್ದಾರೆ.
ನಗರದ ನಿವಾಸಿ ಮಧು ಕಳೆದ ಹಲವು ತಿಂಗಳಿಂದ ಅರಣ್ಯ ಇಲಾಖೆ ನಾಟಿ ಮಾಡಿದ ಗಿಡ ಮರಗಳಿಗೆ ವಾರಕ್ಕೊಮ್ಮೆ ಸ್ನೇಹಿತರು ಹಾಗೂ ಮಕ್ಕಳೊಂದಿಗೆ ಸೇರಿ ನೀರುಣಿಸುತ್ತಿದ್ದಾರೆ. ಈ ಮೂಲಕ ಸಾರ್ವಜನಿಕರ ಪ್ರಶಂಸೆಗೆ ಪಾತ್ರರಾಗಿದ್ದಾರೆ.