ETV Bharat / state

ಊರಿಗೆ ತೆರಳಲು ನಿಲ್ಲಿಸದ ಬಸ್​ಗೆ ಕಲ್ಲೆಸೆದ ಮಹಿಳೆ.. 5000 ದಂಡ, ಅದೇ ಬಸ್​ನಲ್ಲಿ ಪ್ರಯಾಣ

ಊರಿಗೆ ತೆರಳಲು ಯಾವುದೊಂದು ಬಸ್​ ನಿಲ್ಲಿಸದೇ ಇದ್ದ ಕಾರಣ ಮಹಿಳೆ ಕೋಪದಿಂದ ಬಸ್​ಗೆ ಕಲ್ಲೆಸೆದ ಘಟನೆ ಕೊಪ್ಪಳದಲ್ಲಿ ನಡೆದಿದೆ.

ಒಡೆದ ಗಾಜು
ಒಡೆದ ಗಾಜು
author img

By

Published : Jun 26, 2023, 9:18 AM IST

Updated : Jun 26, 2023, 9:48 AM IST

ಘಟನೆ ಕುರಿತು ವಿವರಣೆ ನೀಡುತ್ತಿರುವ ಚಾಲಕ

ಕೊಪ್ಪಳ: ತನ್ನ ಊರಿಗೆ ತೆರಳಲು ಯಾವುದೊಂದು ಬಸ್​ ನಿಲ್ಲಿಸದ ಕಾರಣ, ಕೊಪ್ಪಳದಿಂದ - ಹೊಸಪೇಟೆಗೆ ಹೊರಟಿದ್ದ ನಾನ್ ಸ್ಟಾಪ್ ಬಸ್​ಗೆ ಮಹಿಳೆಯೊಬ್ಬರು ಕಲ್ಲೆಸೆದ ಘಟನೆ ಕೊಪ್ಪಳದಲ್ಲಿ ಜರುಗಿದೆ. ಕೊಪ್ಪಳದ ಹೊಸಲಿಂಗಾಪುರ ಬಳಿ ಈ ಘಟನೆ ನಡೆದಿದೆ. ಇಲಕಲ್ಲ ಬಳಿಯ ಪಾಪನಳ್ಳಿ ನಿವಾಸಿ ಲಕ್ಷ್ಮಿ ಎಂಬಾಕೆ ಕೊಪ್ಪಳದ ಹುಲಿಗಿಯ ಹುಲಿಗೆಮ್ಮ ದೇವಿ ದರ್ಶನಕ್ಕೆ ಬಂದಿದ್ದರು. ಹುಲಿಗೆಮ್ಮನ ದರ್ಶನ ಪಡೆದು ಲಿಂಗಾಪುರ ಬಳಿ ಬಸ್​ಗಾಗಿ ಮಳೆಯಲ್ಲಿ ಕಾದು ಕುಳಿತಿದ್ದ ಲಕ್ಷ್ಮಿಗೆ ತನ್ನ ಊರಿಗೆ ತೆರಳಲು ಯಾವೊಂದು ಬಸ್ ನಿಲ್ಲಿಸದ ಕಾರಣ ಕೋಪ ಬಂದು ಬಸ್​ಗೆ ಕಲ್ಲೆಸೆದಿದ್ದಾರೆ. ಪರಿಣಾಮ ಬಸ್​ನ ಕಿಟಕಿ ಕೆಳಗಿನ ಗಾಜು ಒಡೆದಿದೆ.

5000 ರೂ ದಂಡ ಕಟ್ಟಿದ ಮಹಿಳೆ: ಕೊಪ್ಪಳ ಘಟಕದ KA-35, F-252 ಬಸ್​ನ ಗ್ಲಾಸ್ ಡ್ಯಾಮೇಜ್ ಆದ ಕಾರಣ, ಕೊಪ್ಪಳದ ಮುನಿರಾಬಾದ್ ಪೊಲೀಸ್ ಠಾಣೆಗೆ ಬಸ್​ ನಿರ್ವಾಹಕರು ಬಸ್​ ಅನ್ನು ಪ್ಯಾಸೆಂಜರ್ ಸಮೇತ ಬಸ್ ನಿಲ್ಲಿಸಿ ದೂರು ನೀಡಲು ಮುಂದಾಗಿದ್ದರು. ಆದರೆ ಡಿಪೋ ಮ್ಯಾನೇಜರ್ 5000ರೂ, ದಂಡ ಕೇಳಿದ್ದಾರೆ. ಇಲ್ಲವಾದಲ್ಲಿ ಎಫ್ ಐ ಆರ್ ಮಾಡುವುದಾಗಿ ಲಕ್ಷ್ಮಿಗೆ ಖಡಕ್ ವಾರ್ನಿಂಗ್ ನೀಡಿದ್ದಾರೆ. ಬಳಿಕ ಮಾಡಿದ ತಪ್ಪಿಗೆ ಕ್ಷಮೆ ಕೇಳಿ ಪೊಲೀಸರಿಗೆ ಮನವಿ ಮಾಡಿ ಕೊನೆಗೆ 5000 ದಂಡ ಕಟ್ಟಿ ಅದೇ ಬಸ್​ಲ್ಲಿ ಲಕ್ಷ್ಮಿ ತೆರಳಿದ್ದಾರೆ.

ನಾರಿ 'ಶಕ್ತಿ' ಎಫೆಕ್ಟ್​: ನೂತನ ಕಾಂಗ್ರೆಸ್​ ಸರ್ಕಾರ ತನ್ನ ಗ್ಯಾರಂಟಿಯಲ್ಲಿ ಒಂದಾದ ಶಕ್ತಿ ಯೋಜನೆ ಮೂಲಕ ರಾಜ್ಯದ ಮಹಿಳೆಯರಿಗೆ ಉಚಿತ ಬಸ್​ ಪ್ರಯಾಣ ಅವಕಾಶ ಒದಗಿಸಿದೆ. ಪರಿಣಾಮ ರಾಜ್ಯದಲ್ಲಿ ಮಹಿಳೆಯ ಬಸ್​ ಓಡಾಟ ಹೆಚ್ಚಾಗಿದೆ. ಎಲ್ಲ ಸರ್ಕಾರಿ ಬಸ್​ನಲ್ಲಿ ನಾರಿಮಣಿಯರೇ ತುಂಬಿ ತುಳುಕಿ ಕಂಡೆಕ್ಟರ್​ಗೇ ಬಸ್​ನಲ್ಲಿ ನಿಲ್ಲಲು ಜಾಗವ ಇಲ್ಲದಂತಾಗಿದೆ.

ಇನ್ನು ಹಾವೇರಿ ನಿಲ್ದಾಣದಲ್ಲಿ ಡ್ರೈವರ್​ ಸೀಟ್​ನ ಡೋರ್​ನ ಮೂಲಕವೇ ಪುರುಷರು ಬಸ್​ ಏರಿದ ಘಟನೆ ನಡೆದಿದೆ. ಬಸ್ ಸಂಖ್ಯೆ ಕಡಿಮೆ ಇರುವ ಹಿನ್ನೆಲೆಯಲ್ಲಿ ಪ್ರಯಾಣಿಕರು ಪರದಾಡಿದ್ದಾರೆ. ಅದರಲ್ಲೂ ಪುರುಷ ಪ್ರಯಾಣಿಕರು ಬಸ್​ನಲ್ಲಿ ಆಸನಕ್ಕಾಗಿ ಪೈಪೋಟಿ ನಡೆಸುವ ಪರಿಸ್ಥಿತಿ ಇದೆ. ಬಸ್​ನ ಬಾಗಿಲ ಬಳಿಯೂ ಮಹಿಳೆಯರೇ ತುಂಬಿದ್ದರಿಂದ ತಾಳ್ಮೆ ಕಳೆದುಕೊಂಡ ಪುರುಷರು ಬಸ್​ ಒಳಗೆ ಹೋಗಲು ಬಸ್​ನ ಡ್ರೈವರ್​ ಸೀಟ್​ನಿಂದ ಬಸ್​ ಹತ್ತಿದ್ದಾರೆ.

ಇನ್ನೊಂದು ಕಡೆ ಚಾಮರಾಜನಗರದ ಕೊಳ್ಳೇಗಾಲದಲ್ಲಂತೂ ಮಹಿಳೆಯರ ಕಿತ್ತಾಟಕ್ಕೆ ಸರ್ಕಾರಿ ಬಸ್​ನ ಬಾಗಿಲೇ ಕಿತ್ತು ಬಂದಿತ್ತು. ಆ ಪೋಟೋವು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಕೂಡ ಆಗಿದ್ದು, ಈ ಘಟನೆಗೆ 'ವುಮೆನ್​ ಪವರ್​' ಅಂತ ನೆಟ್ಟಿಗರು ಕಾಮೆಂಟ್​ ಮಾಡಿದ್ದರು. ಇನ್ನು ಮಹಿಳೆಯರೇ ಬಸ್​ನಲ್ಲಿದ್ದರಿಂದ ಬಸ್​ ಏರಲು ನಿರಾಕರಿಸಿ ಕಣ್ಣೀರಿಟ್ಟ ಗದಗದ ಬಾಲಕನ ವಿಡಿಯೋವಂತೂ ಎಲ್ಲೆಡೆ ಸದ್ದು ಮಾಡಿತ್ತು.

ಬಾಲಕ ತನ್ನ ತಾಯಿ ಜತೆಗೆ ದಾವಲ್ ಮಲ್ಲಿಕ್ ದರ್ಗಾ ನೋಡಲು ಬಂದಿದ್ದ. ವೀಕೆಂಡ್ ಹಾಗೂ ಅಮಾವಾಸ್ಯೆ ಹಿನ್ನೆಲೆ ಬಸ್‌ಗಳೆಲ್ಲ ಮಹಿಳೆಯರಿಂದ ಭರ್ತಿ ಆಗಿ ಬರುತ್ತಿದ್ದವು. ಇದರಿಂದ ಸುಸ್ತಾದ ಬಾಲಕ ಎಲ್ಲ ಬಸ್​ಗಳು ಭರ್ತಿಯಾಗಿ ಹೋಗುತ್ತಿರುವುದನ್ನು ನೋಡಿ ಕಣ್ಣೀರು ಹಾಕತೊಡಗಿದ. ಅಲ್ಲದೇ ಈ ನೂಕು ನುಗ್ಗಲಿನಲ್ಲಿ ನಾನು ಬರುವುದಿಲ್ಲ ಎಂದು ಹಠ ಹಿಡಿದಿದ್ದ. ಬಾಲಕನನ್ನು ಸಮಾಧಾನ ಮಾಡಲು ತಾಯಿ ಹರಸಾಹಸ ಪಡಬೇಕಾದ ಸನ್ನಿವೇಶ ಉಂಟಾಗಿತ್ತು.

ಇದನ್ನೂ ಓದಿ: ಮಹಿಳೆಯರ ನೂಕುನುಗ್ಗಲಿಗೆ ಬೇಸತ್ತು ಚಾಲಕನ ಬಾಗಿಲ​ ಮೂಲಕವೇ ಬಸ್‌ ಸೇರಿದ ಪುರುಷರು: ವಿಡಿಯೋ

Last Updated : Jun 26, 2023, 9:48 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.