ಗಂಗಾವತಿ: ಬಳ್ಳಾರಿ ಜಿಲ್ಲೆಯಿಂದ ಸಿಂಧನೂರು ಗ್ರಾಮೀಣ ಠಾಣೆಗೆ ವರ್ಗಾವಣೆಯಾಗಿದ್ದ ಮಹಿಳಾ ಪಿಎಸ್ಐವೋರ್ವರು ಕೇವಲ ಒಂದು ದಿನ ಕೆಲಸ ಮಾಡಿ ಮತ್ತೆ ವರ್ಗಾವಣೆಯಾಗಿದ್ದರು. ಬಳಿಕ ಗಂಗಾವತಿ ಗ್ರಾಮೀಣ ಠಾಣೆ, ಆ ಬಳಿಕ ಕಾರಟಗಿಗೆ ವರ್ಗಾವಣೆಗೊಂಡಿದ್ದರು.
ಇದೀಗ ಗಂಗಾವತಿ, ಕಾರಟಗಿ ಬಿಟ್ಟು ಮಹಿಳಾ ಪಿಎಸ್ಐ ಕನಕಗಿರಿಗೆ ವರ್ಗಾವಣೆಯಾಗಿದ್ದು, ಕೇವಲ ಮೂರು ತಿಂಗಳ ಅವಧಿಯಲ್ಲಿ ನಾಲ್ಕು ಕಡೆ ವರ್ಗಾವಣೆಯಾಗಿರುವುದು ಅಚ್ಚರಿಗೆ ಕಾರಣವಾಗಿದೆ.
ಮೂಲತಃ ಬಳ್ಳಾರಿ ಜಿಲ್ಲೆಯವರಾದ ಮಹಿಳಾ ಪಿಎಸ್ಐ ತಾರಾಬಾಯಿ ಕಳೆದ ಡಿಸೆಂಬರ್ ಕೊನೆಯ ವಾರದಲ್ಲಿ ಸಿಂಧನೂರು ಗ್ರಾಮೀಣ ಠಾಣೆಗೆ ವರ್ಗಾವಣೆಗೊಂದು ಬಂದಿದ್ದರು. ಆದರೆ ಕೇವಲ ಒಂದು ದಿನ ಕರ್ತವ್ಯಕ್ಕೆ ಹಾಜರಾಗಿದ್ದು, ಅವರನ್ನು ಗಂಗಾವತಿ ಗ್ರಾಮೀಣ ಠಾಣೆಗೆ ವರ್ಗಾವಣೆ ಮಾಡಲಾಯಿತು. ಬಳಿಕ ಕಾರಟಗಿಗೆ ವರ್ಗಾವಣೆಗೊಂಡು, ಇದೀಗ ಕನಕಗಿರಿಗೆ ವರ್ಗಾವಣೆಯಾಗಿದ್ದಾರೆ.