ಗಂಗಾವತಿ: ಗಂಗಾವತಿಯಿಂದ ಸಿಂಧನೂರಿಗೆ ಹೋಗುವ 48 ಕಿ.ಮೀ. ರಸ್ತೆಯ ಪಯಣದಲ್ಲಿ ಮಾರ್ಗ ಮಧ್ಯೆ ಇಡೀ ಭೂಮಿಗೆ ಹಚ್ಚಹಸಿರ ಹೊದಿಕೆ ಹಾಕಿದಂತ ದೃಶ್ಯ ಕಾಣುತ್ತಿದ್ದು, ಪ್ರಯಾಣಿಕರ ಆಯಾಸವನ್ನು ದೂರ ಮಾಡಿ ಮನಸ್ಸಿಗೆ ಮುದ ನೀಡುತ್ತಿದೆ.
ರಸ್ತೆಯ ಎಡ ಮತ್ತು ಬಲಕ್ಕೆ ಕಣ್ಣು ಹಾಯಿಸಿದಷ್ಟು ಹಸಿರು ಹೊದ್ದು ಮಲಗಿರುವ ಭೂರಮೆಯ ಸುಂದರ ನೋಟ, ಬೆಳಗ್ಗೆ ಮತ್ತು ಸಂಜೆ ಈ ರಸ್ತೆಯಲ್ಲಿ ಓಡಾಡುತ್ತಿದ್ದರೆ ಅದೇನೋ ಮನಸ್ಸಿಗೆ ನವೋಲ್ಲಾಸ. ಈ ಪ್ರಕೃತಿ ಸೊಬಗಿನ ಕುರಿತು ಸ್ಥಳೀಯರಾದ ಚನ್ನಬಸವ ಕೊಟಗಿ ಅವರು ಈಟಿವಿ ಭಾರತ್ ದೊಂದಿಗೆ ಅಭಿಪ್ರಾಯ ಹಂಚಿಕೊಂಡಿದ್ದಾರೆ.