ಕೊಪ್ಪಳ: ಜಿಲ್ಲೆಯಲ್ಲಿ ಲಾಕ್ ಡೌನ್ ಸಡಿಲಿಕೆ ಮಾಡಿರುವ ಹಿನ್ನೆಲೆ ವ್ಯಾಪಾರ ವಹಿವಾಟಿಗೆ ಅನುಮತಿ ನೀಡಲಾಗಿದೆ. ಹೀಗಾಗಿ, ಜನರು ಸಾಮಾಜಿಕ ಅಂತರ ಕಾಯ್ದುಕೊಳ್ಳಲು ನಗರದ ಅಂಗಡಿ ಮುಂಗಟ್ಟುಗಳ ಮುಂದೆ ಸ್ವಯಂ ಸೇವಕರ ತಂಡ ವೃತ್ತ ರಚನೆ ಮಾಡಿದೆ.
ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಸದಸ್ಯರು ರಾತ್ರಿಯಿಡೀ ನಗರದ ಜವಾಹರ ರಸ್ತೆಯ ಕಿರಾಣಿ ಅಂಗಡಿ, ಮೆಡಿಕಲ್ ಶಾಪ್ , ಬ್ಯಾಂಕ್, ಪೋಸ್ಟ್ ಆಫೀಸ್ ಮುಂದೆ ಪೈಂಟ್ನಿಂದ ಸೋಶಿಯಲ್ ಡಿಸ್ಟೆನ್ಸ್ ವೃತ್ತಗಳನ್ನು ರಚಿಸಿದರು.
ಅಲ್ಲದೆ ಎಲ್ಲಾ ಅಂಗಡಿಗಳ ಮುಂದೆ ಕಾಯೋಣ ಸಾಮಾಜಿಕ ಅಂತರ, ಮಾಡೋಣ ವ್ಯಾಪಾರ ನಂತರ ಎಂಬ ಜಾಗೃತಿ ಭಿತ್ತಿಪತ್ರ ಅಂಟಿಸಿದರು.