ETV Bharat / state

ಔಷಧಿ ಹೆಸರಲ್ಲಿ ಹೆಚ್ಐವಿ ಸೋಂಕಿತರಿಂದ ಹಣ ವಸೂಲಿ.. ಲಕ್ಷಾಂತರ ರೂಪಾಯಿ ಪೀಕಿದ ಆರೋಪಿ - etv bharath kannada news

ಗಂಗಾವತಿಯ ಸರ್ಕಾರಿ ಆಸ್ಪತ್ರೆಯಲ್ಲಿ ಹೆಚ್ಐವಿ ಸೋಂಕಿಗೆ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳಿಗೆ ಸೋಂಕನ್ನು ಗುಣಪಡಿಸುವ ಔಷಧಿಯನ್ನು ತಂದುಕೊಡುವುದಾಗಿ ವ್ಯಕ್ತಿಯೊಬ್ಬ ಹಣ ವಸೂಲಿ ಮಾಡಿರುವ ಆರೋಪ ಪ್ರಕರಣ ಬೆಳಕಿಗೆ ಬಂದಿದೆ.

Etv Bharat
Etv Bharat
author img

By

Published : Nov 30, 2022, 8:27 PM IST

ಗಂಗಾವತಿ (ಕೊಪ್ಪಳ) : ಹೆಚ್ಐವಿ ಸೋಂಕನ್ನು ಗುಣಪಡಿಸುವ ಮದ್ದು ಮಾರುಕಟ್ಟೆಯಲ್ಲಿ ಲಭ್ಯವಿದೆ. ಹಣ ಕೊಟ್ಟರೆ ಮದ್ದು ತಂದು ಕೊಡುವುದಾಗಿ ಸೋಂಕಿತ ಕೆಲ ರೋಗಿಗಳಿಂದ ವ್ಯಕ್ತಿಯೊಬ್ಬ ಹಣ ವಸೂಲಿ ಮಾಡುತ್ತಿರುವ ಆರೋಪ ಪ್ರಕರಣ ನಗರದಲ್ಲಿ ಬೆಳಕಿಗೆ ಬಂದಿದೆ.

ಗಂಗಾವತಿಯ ಸರ್ಕಾರಿ ಆಸ್ಪತ್ರೆಯಲ್ಲಿ ಹೆಚ್ಐವಿ ಸೋಂಕಿಗೆ ಚಿಕಿತ್ಸೆ ಪಡೆಯುತ್ತಿರುವ ಕೆಲವರ ಮಾಹಿತಿ ಹೇಗೋ ಪಡೆದುಕೊಂಡಿರುವ ಈ ವ್ಯಕ್ತಿ, ನಗರದ ನಾನಾ ವಾರ್ಡ್​ನ ಸೋಂಕಿತರನ್ನು ಸಂಪರ್ಕಿಸಿ ಒಬ್ಬೊಬ್ಬರಿಂದ ಮೂರರಿಂದ ಹನ್ನೆರಡು ಸಾವಿರಕ್ಕೂ ಅಧಿಕ ಮೊತ್ತದ ಹಣ ಪೀಕಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ಮತ್ತೊಂದು ಗೌಪ್ಯ ರೋಗ ಇರುವ ವ್ಯಕ್ತಿಯೊಬ್ಬರಿಂದ ಚಿಕಿತ್ಸೆ ಕೊಡಿಸುವುದಾಗಿ ಒಂದೂವರೆ ಲಕ್ಷ ಮೊತ್ತದ ಹಣ ಲಪಟಾಯಿಸಿದ್ದಾನೆ ಎಂದು ತಿಳಿದುಬಂದಿದೆ.

ಈ ವ್ಯಕ್ತಿ ರೋಗಿಗಳಿಂದ ಹಣ ಪಡೆಯಲು ಕಥೆ ಕಟ್ಟಿದ್ದಾನಂತೆ. ಈ ವ್ಯಕ್ತಿ ಯಾರು?. ಹೆಸರು? ಊರು ಏನು ಗೊತ್ತಾಗಿಲ್ಲ. ಆರೋಗ್ಯ ಇಲಾಖೆಯ ಸಿಬ್ಬಂದಿ ಇರಬೇಕು ಎಂದು ಕೆಲವರು ನಂಬಿ ಹಣ ನೀಡಿದರೆ, ಮತ್ತೆ ಕೆಲವರು ಕಾಯಿಲೆ ವಾಸಿಯಾದರೆ ಸಾಕು ಎಂದು ಹಣ ನೀಡಿದ್ದರಂತೆ.

ಈ ಸಂಬಂಧ ಗಂಗಾವತಿ ಸರ್ಕಾರಿ ಆಸ್ಪತ್ರೆಯ ಆಪ್ತಸಮಾಲೋಚಕಿ ಪಲ್ಲವಿ ಎಂಬುವರು ಇದೀಗ ಗಂಗಾವತಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಓದಿ: ಅಧಿಕಾರಿಗಳ ಹೆಸರಿನಲ್ಲಿ ಹಣ ವಸೂಲಿ: 7 ಮಂದಿ ಆರೋಪಿಗಳ ಬಂಧನ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.