ಕೊಪ್ಪಳ: ಸರ್ಕಾರ ಈಗ ಪ್ರಕಟಿಸಿರುವ ಕೊಪ್ಪಳ ನಗರಸಭೆ ಅಧ್ಯಕ್ಷ ಸ್ಥಾನದ ಮೀಸಲಾತಿಯನ್ನು ಪ್ರಶ್ನಿಸಿ ಸದಸ್ಯೆಯೊಬ್ಬರು ಮತ್ತೆ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ.
ಕೊಪ್ಪಳ ನಗರಸಭೆಯ 26 ನೇ ವಾರ್ಡ್ನ ಸದಸ್ಯೆ ದೇವಕ್ಕ ಲಕ್ಷ್ಮಣ ಕಂದಾರಿ ಅವರು ಧಾರವಾಡ ಹೈಕೋರ್ಟ್ ಪೀಠದಲ್ಲಿ ಇಂದು ಅರ್ಜಿ ಸಲ್ಲಿಸಿದ್ದಾರೆ. ಸೋಮವಾರ ಅರ್ಜಿ ವಿಚಾರಣೆಗೆ ಬರಲಿದೆ ಎಂದು ಹೇಳಲಾಗುತ್ತಿದೆ.
![court](https://etvbharatimages.akamaized.net/etvbharat/prod-images/kn-kpl-03-12-court-mettilu-photo-7202284_12032020174130_1203f_1584015090_1006.jpg)
ಈ ಮೊದಲು ಪರಿಶಿಷ್ಟ ಜಾತಿ ಮಹಿಳೆಗೆ ಮೀಸಲಾಗಿದ್ದ ಅಧ್ಯಕ್ಷ ಸ್ಥಾನವನ್ನು ಈಗ ಸರ್ಕಾರ ಎಸ್ಟಿಗೆ ಮೀಸಲಾತಿ ನಿಗದಿ ಮಾಡಿರುವುದನ್ನು ಪ್ರಶ್ನಿಸಿ ಹಾಗೂ ಈಗ ಪ್ರಕಟಿಸಿರುವ ಮೀಸಲಾತಿಗೆ ತಡೆಯಾಜ್ಞೆ ಕೋರಿ ಅವರು ನ್ಯಾಯಾಲಯದ ಮೆಟ್ಟಿಲೇರಿದ್ದಾರೆ ಎಂದು ತಿಳಿದು ಬಂದಿದೆ.