ಸಾರ್ವಜನಿಕ ಶೌಚಾಲಯವನ್ನೇ ಶಯನ ಗೃಹವಾಗಿಸಿಕೊಂಡ ಭೂಪ - A man occupied and lived public toilet
ಸಣ್ಣ ನೀರಾವರಿ ಇಲಾಖೆಯ ಆವರಣ ಗೋಡೆಗೆ ಹೊಂದಿಕೊಂಡಿರುವ ಸ್ಥಳದಲ್ಲಿ 10 ಲಕ್ಷ ರೂ. ವೆಚ್ಚದಲ್ಲಿ ಪೇ ಅಂಡ್ ಯೂಸ್ ಸುಲಭ ಮಾದರಿಯ ಶೌಚಾಲಯ ನಿರ್ಮಿಸಲಾಗಿದ್ದು, ಇದನ್ನು ಅನಾಮಧೇಯ ವ್ಯಕ್ತಿಯೊಬ್ಬರು ಸ್ವಂತಕ್ಕೆ ಬಳಸಿಕೊಂಡಿದ್ದಾರೆ.
![ಸಾರ್ವಜನಿಕ ಶೌಚಾಲಯವನ್ನೇ ಶಯನ ಗೃಹವಾಗಿಸಿಕೊಂಡ ಭೂಪ ಸಾರ್ವಜನಿಕ ಶೌಚಾಲಯ](https://etvbharatimages.akamaized.net/etvbharat/prod-images/768-512-11053468-thumbnail-3x2-lekh.jpg?imwidth=3840)
ಕುಷ್ಟಗಿ/ಕೊಪ್ಪಳ: ಕುಷ್ಟಗಿ ಪುರಸಭೆಯ 1ನೇ ವಾರ್ಡ್ ವ್ಯಾಪ್ತಿಯ ಲಿಯೋ ಕಾಲೋನಿ ಬಳಿ ಸುಲಭ ಮಾದರಿ ಶೌಚಾಲಯದ ಹೊಸ ಕಟ್ಟಡವೊಂದನ್ನು ವ್ಯಕ್ತಿಯೊಬ್ಬ ಸ್ವಂತಕ್ಕೆ ಬಳಸಿಕೊಂಡಿರುವುದು ಬೆಳಕಿಗೆ ಬಂದಿದೆ.
ಸಣ್ಣ ನೀರಾವರಿ ಇಲಾಖೆಯ ಆವರಣ ಗೋಡೆಗೆ ಹೊಂದಿಕೊಂಡಿರುವ ಸ್ಥಳದಲ್ಲಿ 10 ಲಕ್ಷ ರೂ. ವೆಚ್ಚದಲ್ಲಿ ಪೇ ಅಂಡ್ ಯೂಸ್ ಸುಲಭ ಮಾದರಿಯ ಶೌಚಾಲಯ ನಿರ್ಮಿಸಲಾಗಿತ್ತು. ಸದರಿ ಶೌಚಾಲಯದ ನಿರ್ವಹಣೆ ಸಾಧ್ಯವಾಗದ ಹಿನ್ನೆಲೆಯಲ್ಲಿ ಅದನ್ನು ಬಳಸದೇ ನಿರ್ಲಕ್ಷ್ಯ ವಹಿಸಲಾಗಿತ್ತು. ಸದರಿ ಕಟ್ಟಡವನ್ನು ಬಳಕೆ ಮಾಡುತ್ತಿಲ್ಲ ಎಂಬ ಕಾರಣಕ್ಕೆ ಅನಾಮಧೇಯ ವ್ಯಕ್ತಿಯೊಬ್ಬರು ಸ್ವಂತಕ್ಕೆ ಬಳಸಿಕೊಂಡಿದ್ದಾರೆ.
ಈ ವಿಚಾರ ಬೆಳಕಿಗೆ ಬರುತ್ತಿದ್ದಂತೆ ಮುಖ್ಯಾಧಿಕಾರಿ ಉಮೇಶ ಕೆ. ಹಿರೇಮಠ, ನೈರ್ಮಲ್ಯ ಅಧಿಕಾರಿ ಮಹೇಶ ಅಂಗಡಿ ನೇತೃತ್ವದ ತಂದ ದಾಳಿ ನಡೆಸಿದ್ದು, ಶೌಚಾಲಯಕ್ಕೆ ಅಳವಡಿಸಿದ ಸಾಮಗ್ರಿಗಳನ್ನು ತೆಗೆದು ಆ ಸ್ಥಳದಲ್ಲಿ ಬೆಡ್ ರೂಂ, ಅಟ್ಯಾಚ್ ಬಾತ್ ರೂಂ, ಪ್ಲಾಸ್ಟಿಕ್ ಕುರ್ಚಿ, ಫ್ಯಾನ್, ಹಾಸಿಗೆ ಇತ್ಯಾದಿ ವಸ್ತುಗಳನ್ನು ಇಟ್ಟಿರುವುದು ಕಂಡು ಬಂದಿದೆ.
ಇನ್ನು ಈ ಎಲ್ಲಾ ವಸ್ತುಗಳನ್ನು ಪುರಸಭೆ ಅಧಿಕಾರಿಗಳು ವಶಪಡಿಸಿಕೊಂಡಿದ್ದು, ಕಟ್ಟಡ ದುರುಪಯೋಗ ಪಡಿಸಿಕೊಂಡಿರುವ ವಿಚಾರ ಸಾರ್ವಜನಿಕ ಚರ್ಚೆ ಗ್ರಾಸವಾಗಿದೆ.