ಗಂಗಾವತಿ: ವಿವಾಹ ನಿಶ್ಚಯವಾದ ಹುಡುಗನೊಬ್ಬ ನೀಡುತ್ತಿದ್ದ ಕಿರುಕುಳ ತಾಳಲಾರದೇ ಹುಡಗಿಯೊಬ್ಬಳು ಸೆಲ್ಫಿ ವಿಡಿಯೋ ಮಾಡಿ ತನ್ನ ಅಳಲನ್ನು ತೋಡಿಕೊಂಡಿರುವ ಘಟನೆ ನಡೆದಿದೆ.
ಗಂಗಾವತಿ ತಾಲೂಕಿನ ಹೇರೂರು ಗ್ರಾಮದ ಯುವತಿಯೊಬ್ಬಳಿಗೆ ಹೊಸಪೇಟೆ ತಾಲೂಕಿನ ಮಲಪನಗುಡಿಯ ಮಂಜುನಾಥ ಎಂಬ ಯುವಕನೊಂದಿಗೆ ಮದುವೆ ನಿಗದಿ ಮಾಡಲಾಗಿತ್ತು. ಆದರೆ ಯುವಕ ಅನಗತ್ಯವಾಗಿ ಯುವತಿಯ ಶೀಲ ಶಂಕಿಸಿ ಆಗಾಗ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ. ಇದರಿಂದ ಬೇಸತ್ತ ಯುವತಿ ಸೆಲ್ಫಿ ವಿಡಿಯೋ ಮಾಡಿ ಕಳೆದ ಒಂದು ವಾರದಿಂದ ಊರು ಬಿಟ್ಟಿದ್ದಾಳೆ. ಈವರೆಗೂ ಯುವತಿ ಎಲ್ಲಿದ್ದಾಳೆ ಎಂಬ ಮಾಹಿತಿ ತಿಳಿದು ಬಂದಿಲ್ಲ.
ಸೆಲ್ಫಿ ವಿಡಿಯೋದಲ್ಲಿ ತಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದು, ಯಾರು ತನ್ನನ್ನು ಹುಡುಕುವ ಯತ್ನ ಮಾಡದಂತೆ ಯುವತಿ ಮನವಿ ಮಾಡಿದ್ದಾಳೆ. ಈ ಕುರಿತು ಗಂಗಾವತಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.