ETV Bharat / state

ಚರ್ಚೆಗೆ ಗ್ರಾಸವಾಯ್ತು ಡಿಕೆಶಿ ಹಾಕಿದ್ದಾರೆ ಎನ್ನಲಾದ ಪೋಸ್ಟ್..! ಸಂಸದ ಸಂಗಣ್ಣ ಕರಡಿ ಸ್ಪಷ್ಟನೆ ಏನು? - ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್

ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಹಾಕಿದ್ದಾರೆ ಎನ್ನಲಾದ ಫೇಸ್​​ಬುಕ್ ಪೋಸ್ಟ್​ವೊಂದು ಕೊಪ್ಪಳ ಜಿಲ್ಲೆಯಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ಪೋಸ್ಟ್​ನಲ್ಲಿ ಸಂಗಣ್ಣ ಕರಡಿ ಅವರ ಹೆಸರು ಪ್ರಸ್ತಾಪವಾಗಿರುವುದು ಗೊಂದಲದ ಜೊತೆ ಕುತೂಹಲಕ್ಕೂ ಕಾರಣವಾಗಿತ್ತು. ಆದರೆ ಈಗ ಡಿಕೆಶಿ ಅವರ ಫೇಸ್​​​ಬುಕ್​ನಿಂದ ಈ ಪೋಸ್ಟ್ ಕಾಣೆಯಾಗಿದೆ.

a-fb-post-viral-that-alleges-posted-by-dk-shivakumars
ಚರ್ಚೆಗೆ ಗ್ರಾಸವಾಯ್ತು ಡಿಕೆ ಶಿವಕುಮಾರ್ ಹಾಕಿದ್ದಾರೆ ಎನ್ನಲಾದ ಪೋಸ್ಟ್
author img

By

Published : Jul 29, 2021, 6:59 PM IST

ಕೊಪ್ಪಳ: ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರದ್ದು ಎನ್ನಲಾದ ಫೇಸ್​​​​​ಬುಕ್​ ಪೋಸ್ಟ್​​ವೊಂದು ಜಿಲ್ಲೆಯ ರಾಜಕಾರಣದಲ್ಲಿ ಚರ್ಚೆಗೆ ಕಾರಣವಾಗಿದೆ. ತಮ್ಮ ನಿವಾಸದಲ್ಲಿ ಸಂಸದ ಸಂಗಣ್ಣ ಕರಡಿ ಭೇಟಿ ನೀಡಿದ್ದರು‌. ಈ ಸಂದರ್ಭದಲ್ಲಿ ಪಕ್ಷ ಸಂಘಟನೆಯ ಬಗ್ಗೆ ಚರ್ಚಿಸಿದೆ ಎಂದು ಪೋಸ್ಟ್ ಮಾಡಿರುವುದು ಕುತೂಹಲ ಮೂಡಿಸಿದೆ.

a-fb-post-viral-that-alleges-posted-by-dk-shivakumars
ಚರ್ಚೆಗೆ ಗ್ರಾಸವಾಯ್ತು ಡಿಕೆ ಶಿವಕುಮಾರ್ ಹಾಕಿದ್ದಾರೆ ಎನ್ನಲಾದ ಪೋಸ್ಟ್

ಆದರೆ ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ಪ್ರತಿಕ್ರಿಯಿಸಿರುವ ಸಂಸದ ಕರಡಿ, ನಾನು ದೆಹಲಿಯಲ್ಲಿದ್ದೇನೆ. ನಾನು ಯಾರನ್ನೂ ಭೇಟಿ ಮಾಡಿಲ್ಲ. ಡಿ.ಕೆ ಶಿವಕುಮಾರ್ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಟ್ವಿಟ್ ಮಾಡಿದ್ದಾರೆ. ಆದರೆ ಡಿಕೆ ಶಿವಕುಮಾರ್ ಪೋಸ್ಟ್ ಮಾಡಿದ್ದಾರೆ ಎನ್ನಲಾದ ಫೋಟೋದಲ್ಲಿ ಸಂಗಣ್ಣ ಕರಡಿ ಅವರು ಇರಲಿಲ್ಲ. ಬದಲಾಗಿ ರಾಯಚೂರು ಜಿಲ್ಲೆಯ ಶಾಸಕರಾದ ಡಿ.ಎಸ್. ಹೂಲಗೆರೆ ಹಾಗೂ ಬಸನಗೌಡ ದದ್ದಲ ಇರುವುದು ಸ್ಪಷ್ಟವಾಗಿ ಕಾಣಿಸುತ್ತದೆ.

  • ನಾನು ದೆಹಲಿಯಲ್ಲಿ ಲೋಕಸಭಾ ಅಧಿವೇಶನದಲ್ಲಿ ಇರುವ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರನ್ನು ಭೇಟಿ ಮಾಡಿದೇನೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದಾರೆ ನಾನು ಯಾರನ್ನು ಭೇಟಿ ಮಾಡಿಲ್ಲ

    ನನ್ನ ಬಗ್ಗೆ ಅಪಪ್ರಚಾರ ಮಾಡುತ್ತಿರುವ ಡಿ.ಕೆ ಶಿವಕುಮಾರ್.@DKShivakumar pic.twitter.com/Oh2SZf7s4s

    — Karadi Sanganna (@SangannaKaradi) July 29, 2021 " class="align-text-top noRightClick twitterSection" data=" ">

ಡಿ ಕೆ ಶಿವಕುಮಾರ್ ಕಣ್ತಪ್ಪಿನಿಂದ ಸಂಗಣ್ಣ ಹೆಸರು ಹಾಕಿದ್ದಾರೋ ಅಥವಾ ಡಿಕೆಶಿ ಹೆಸರಲ್ಲಿ ಫೇಕ್​ ಅಕೌಂಟ್ ಮೂಲಕ ಈ ಸಂದೇಶ ಹರಡಲಾಗಿದೆಯಾ ಎಂಬುದು ನಿಗೂಢವಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.