ETV Bharat / state

ರೋಡ್​​ ರೋಲರ್​​​​​ ಹರಿದು ಚಾಲಕ ಸ್ಥಳದಲ್ಲೇ ಸಾವು

author img

By

Published : Dec 28, 2019, 5:28 PM IST

ರೋಡ್ ರೋಲರ್ ಹರಿದು ಚಾಲಕ ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆ ಗಂಗಾವತಿ ನಗರದ ಹೊರ ವಲಯದಲ್ಲಿ ನಡೆದಿದೆ.

driver
ಚಾಲಕ ಸಾವು

ಗಂಗಾವತಿ/ಕೊಪ್ಪಳ: ರೋಡ್ ರೋಲರ್ ಹರಿದು ಅದರ ಚಾಲಕ ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆ ನಗರದ ಹೊರ ವಲಯ ಆನೆಗೊಂದಿ ರಸ್ತೆಯಲ್ಲಿರುವ ಆಂಜನೇಯ ಕಣಿವೆ ಬಳಿ ಸಂಭವಿಸಿದೆ.

ರಸ್ತೆ ಕಾಮಗಾರಿಗಳಿಗೆ ಬಳಕೆಯಾಗುವ ರೋಡ್ ರೋಲರ್ ಹರಿದು ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಮೃತ ವ್ಯಕ್ತಿಯನ್ನು ನಗರದ ನೀಲಕಂಠೇಶ್ವರ ವೃತ್ತದ ನಿವಾಸಿ ಸುರೇಶ್​​ (35) ಎಂದು ಗುರುತಿಸಲಾಗಿದೆ. ರೋಲರ್​​ನ ಚಕ್ರಗಳಡಿ ಸಿಲುಕಿ ವ್ಯಕ್ತಿ ಸಾವನ್ನಪ್ಪಿದ್ದಾನೆ. ಆನೆಗೊಂದಿಯಿಂದ ಬರುವಾಗ ಕಣಿವೆ ಆಂಜನೇಯ ದೇಗುಲದ ಬಳಿಯ ಇಳಿಜಾರು ಪ್ರದೇಶದಲ್ಲಿ ವಾಹನವನ್ನು ನ್ಯೂಟ್ರಲ್ ಮಾಡಿದ್ದಾರೆ. ಆದರೆ ವಾಹನದ ನಿಯಂತ್ರಣ ಸಿಗದ ಹಿನ್ನೆಲೆ ರಸ್ತೆ ಪಕ್ಕದ ಗದ್ದೆಗೆ ನುಗ್ಗಿದೆ. ಮೈ ಮೇಲೆ ಬೀಳುವ ಆತಂಕದಿಂದ ಸುರೇಶ್​​​ ವಾಹನದಿಂದ ಜಿಗಿದಿದ್ದಾರೆ.

ಚಾಲಕ ಸಾವು

ಆದರೆ ಅವರ ಮೇಲೆಯೇ ವಾಹನ ಬಿದ್ದು ಈ ದುರ್ಘಟನೆ ಸಂಭವಿಸಿದೆ. ಗಂಗಾವತಿ ಗ್ರಾಮೀಣ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Intro:ರಸ್ತೆ ಕಾಮಗಾರಿಗಳಿಗೆ ಬಳಕೆಯಾಗುವ ರೋಡ್ ರೋಲರ್ ಹರಿದು ಅದರ ಚಾಲಕ ಒಬ್ಬರು ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆ ನಗರದ ಹೊರ ವಲಯ ಆನೆಗೊಂದಿ ರಸ್ತೆಯಲ್ಲಿರುವ ಆಂಜನೇಯ ಕಣಿವೆ ಬಳಿ ಸಂಭವಿಸಿದೆ.
Body:ರೋಡ್ ರೋಲರ್ ಹರಿದು ವ್ಯಕ್ತಿ ಸ್ಥಳದಲ್ಲಿಯೇ ಸಾವು
ಗಂಗಾವತಿ:
ರಸ್ತೆ ಕಾಮಗಾರಿಗಳಿಗೆ ಬಳಕೆಯಾಗುವ ರೋಡ್ ರೋಲರ್ ಹರಿದು ಅದರ ಚಾಲಕ ಒಬ್ಬರು ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆ ನಗರದ ಹೊರ ವಲಯ ಆನೆಗೊಂದಿ ರಸ್ತೆಯಲ್ಲಿರುವ ಆಂಜನೇಯ ಕಣಿವೆ ಬಳಿ ಸಂಭವಿಸಿದೆ.
ಮೃತ ವ್ಯಕ್ತಿಯನ್ನು ನಗರದ ನೀಲಕಂಠೇಶ್ವರ ವೃತ್ತದಲ್ಲಿರುವ ಮಾಜಿ ಸಚಿವ ಮಲ್ಲಿಕಾಜರ್ುನ ಅವರ ನಿವಾಸದ ಹಿಂದಿನ ಪ್ರದೇಶದಲ್ಲಿ ವಾಸಿಸುವ ಸುರೇಶ ತಂದೆ ಬಸಣ್ಣ ಐಲಿ (35) ಎಂದು ಗುರುತಿಸಲಾಗಿದೆ. ರೋಲರ್ನ ಚಕ್ರಗಳಡಿ ಸಿಲುಕಿ ವ್ಯಕ್ತಿ ಸಾವನ್ನಪ್ಪಿದ್ದಾನೆ.
ಆನೆಗೊಂದಿಯಿಂದ ಬರುವಾಗ ಕಣಿವೆ ಆಂಜನೇಯ ದೇಗುಲದ ಬಳಿಯ ಇಳಿಜಾರು ಪ್ರದೇಶದಲ್ಲಿ ವಾಹನವನ್ನು ನ್ಯೂಟ್ರಲ್ ಮಾಡಿದ್ದಾರೆ. ಆದರೆ ವಾಹನದ ನಿಯಂತ್ರಣ ಸಿಗದ ಹಿನ್ನೆಲೆ ರಸ್ತೆ ಪಕ್ಕದ ಗದ್ದೆಗೆ ನುಗ್ಗಿದೆ. ಮೈ ಮೇಲೆ ಬೀಳುವ ಆತಂಕದಿಂದ ಸುರೇಶ ವಾಹನದಿಂದ ಜಿಗಿದಿದ್ದಾರೆ.
ಆದರೆ ಅವರ ಮೇಲೆಯೇ ವಾಹನ ಬಿದ್ದು ಈ ಘಟನೆ ನಡೆದಿದೆ. ಈ ಬಗ್ಗೆ ಗಂಗಾವತಿ ಗ್ರಾಮೀಣ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. Conclusion:ಆದರೆ ಅವರ ಮೇಲೆಯೇ ವಾಹನ ಬಿದ್ದು ಈ ಘಟನೆ ನಡೆದಿದೆ. ಈ ಬಗ್ಗೆ ಗಂಗಾವತಿ ಗ್ರಾಮೀಣ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.