ETV Bharat / state

ಐದೆಕರೆ ಜಮೀನಿನಲ್ಲಿ 75 ಟನ್ ನುಗ್ಗೆ ಬೆಳೆ!: ರೈತ ಸಹೋದರರಿಗೆ ಒಳ್ಳೆ ಸಂಪಾದನೆ - gangavthi news

ಇಲ್ಲಿನ ರೈತರೊಬ್ಬರು 75 ಟನ್ ನುಗ್ಗೆ ಬೆಳೆಯನ್ನು ಕಟಾವು ಮಾಡಿದ್ದಾರೆ. ಕಟಾವು ಮಾಡಿದ ಫಸಲನ್ನು ಹೊಸಪೇಟೆ, ಹುಬ್ಬಳ್ಳಿ, ಬೆಂಗಳೂರು, ಪುಣೆ ಮತ್ತು ಬಾಂಬೆಯ ಮಾರುಕಟ್ಟೆಗಳಿಗೆ ಕಳಿಸಲಾಗಿದ್ದು, ಸುಮಾರು ಏಳು ಲಕ್ಷ ರೂಪಾಯಿ ಆದಾಯ ಸಂಪಾದಿಸಿದ್ದಾರೆ.

75 tonnes of vegetable
ಎರಡು ಹೆಕ್ಟೇರು ಪ್ರದೇಶದಲ್ಲಿ 75 ಟನ್ ತರಕಾರಿ: ರೈತರನಿಗೆ ಹಣದ ಫಸಲು
author img

By

Published : May 14, 2020, 7:07 PM IST

ಗಂಗಾವತಿ: ಕೊರೊನಾ ಲಾಕ್​ಡೌನ್ ಬಳಿಕ ಬಹುತೇಕ ಚಟುವಟಿಕೆ ಸ್ತಬ್ಧಗೊಂಡಿದ್ದವು. ಪರಿಣಾಮ ಪ್ರತಿಯೊಬ್ಬರೂ ಕೊರೊನಾದ ಪ್ರಭಾವದಿಂದ ಆರ್ಥಿಕ ಸಂಕಷ್ಟಕ್ಕೀಡಾಗಿದ್ದಾರೆ. ಆದರೆ ಇಲ್ಲಿಬ್ಬರು ರೈತ ಸಹೋದರರು ತಾವು ಬೆಳೆದ ಬೆಳೆಯಿಂದ ಭರ್ಜರಿ ಲಾಭ ಗಳಿಸಿದ್ದಾರೆ.

ತಾಲ್ಲೂಕಿನ ವೆಂಕಟಗಿರಿ ಹೋಬಳಿಯ ಕೇಸರಹಟ್ಟಿ ಗ್ರಾಮ ಪಂಚಾಯಿತಿಯ ಅರಳಿಹಳ್ಳಿ ಗ್ರಾಮದ ರೈತ ಸಹೋದರರಾದ ಶರಣಪ್ಪ ಹಾಗೂ ನಿಜಲಿಂಗಪ್ಪ ತಮ್ಮ ಎರಡು ಹೆಕ್ಟೇರು ( ಅಂದಾಜು 5 ಎಕರೆ) ಭೂಮಿಯಲ್ಲಿ ಕಳೆದ ಸಾಲಿನಲ್ಲಿ ನುಗ್ಗೆ ನಾಟಿ ಮಾಡಿದ್ದರು.

ನರೇಗಾ ಯೋಜನೆಯಲ್ಲಿ ನುಗ್ಗೆ ತೋಟವನ್ನು ವಿಸ್ತರಣೆ ಮಾಡಲಾಗಿತ್ತು. ತೋಟಗಾರಿಕಾ ಇಲಾಖೆಯ ಅಧಿಕಾರಿಗಳ ನಿರ್ದೇಶನದಂತೆ ಈ ಇವರು ಬೆಳೆ ಮಾಡಿದ್ದಾರೆ. ಆದರೀಗ ಈ ರೈತರು 75 ಟನ್ ನುಗ್ಗೆ ಬೆಳೆ ಕಟಾವು ಮಾಡಿದ್ದಾರೆ. ಕಟಾವು ಮಾಡಿದ ನುಗ್ಗೆಯನ್ನು ಹೊಸಪೇಟೆ, ಹುಬ್ಬಳ್ಳಿ, ಬೆಂಗಳೂರು, ಪುಣೆ ಮತ್ತು ಬಾಂಬೆಯ ಮಾರುಕಟ್ಟೆಗಳಿಗೆ ಕಳುಹಿಸಲಾಗಿದೆ. ಸುಮಾರು ಏಳು ಲಕ್ಷ ರೂಪಾಯಿ ಮೊತ್ತದ ಆದಾಯ ರೈತ ಸಹೋದರರ ಕೈ ಸೇರಿದೆ ಎಂದು ತೋಟಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕ ಶಿವಯೋಗಿ ತಿಳಿಸಿದ್ದಾರೆ.

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.