ETV Bharat / state

ಒಂದೇ ಗ್ರಾಮದಲ್ಲಿ 62ಕ್ಕೂ ಹೆಚ್ಚು ಜನರಿಗೆ ಕೊರೊನಾ: ಸೋಂಕಿತರೆಲ್ಲರೂ ವಲಸೆ ಕಾರ್ಮಿಕರು

ಗ್ರಾಮವೊಂದರಲ್ಲಿ ಕಳೆದ ಒಂದು ವಾರದಲ್ಲಿ 62ಕ್ಕೂ ಹೆಚ್ಚು ಸೋಂಕಿತರು ಪತ್ತೆಯಾಗಿದ್ದಾರೆ. ಸೋಂಕಿತರೆಲ್ಲರೂ ವಲಸೆ ಕಾರ್ಮಿಕರೆಂದು ತಿಳಿದುಬಂದಿದೆ.

Anegunidi
Anegunidi
author img

By

Published : May 8, 2021, 5:40 AM IST

ಗಂಗಾವತಿ: ಕೊರೊನಾದ ಎರಡನೇ ಅಲೆ ವ್ಯಾಪಕ ಪ್ರಮಾಣದಲ್ಲಿ ಹರಡುತ್ತಿರುವುದರ ಭಾಗವಾಗಿ ತಾಲೂಕಿನ ಆನೆಗೊಂದಿ ಗ್ರಾಮದಲ್ಲಿ ಕಳೆದ ಒಂದು ವಾರದಲ್ಲಿ 62ಕ್ಕೂ ಹೆಚ್ಚು ಸೋಂಕಿತರು ಪತ್ತೆಯಾಗಿದ್ದಾರೆ.

ಬಹುತೇಕ ಸೋಂಕಿತರು ವಲಸೆ ಹೋಗಿದ್ದವರಾಗಿದ್ದು, ಇದೀಗ ಲಾಕ್​ಡೌನ್​ ಭೀತಿಯಿಂದ ಊರಿಗೆ ಮರಳಿದ್ದಾರೆ. ಹೀಗೆ ವಲಸೆ ಹೋಗಿ ಬಂದ ಕಾರ್ಮಿಕರಲ್ಲಿಯೇ ಹೆಚ್ಚು ಸೋಂಕು ಕಾಣಿಸಿಕೊಂಡಿದೆ.

ಅಂತೆಯೇ ಗ್ರಾಮದಲ್ಲಿ ಜಾಗೃತಿ ಹಾಗೂ ಮುಂಜಾಗ್ರತಾ ಕ್ರಮ ಕೈಗೊಳ್ಳುವ ಉದ್ದೇಶಕ್ಕೆ ತಹಶೀಲ್ದಾರ್ ಯು. ನಾಗರಾಜ್ ಗ್ರಾಮಕ್ಕೆ ಭೇಟಿ ನೀಡಿದರು. ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಸಿಬ್ಬಂದಿಗೆ ಸೂಚನೆ ನೀಡಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.