ETV Bharat / state

ಕೊಪ್ಪಳದಲ್ಲಿ 6 ಕೊರೊನಾ ಕೇಸ್​ ಪತ್ತೆ.. ಜಿಲ್ಲಾಧಿಕಾರಿ ಪಿ ಸುನೀಲ್‌ಕುಮಾರ್ ಸ್ಪಷ್ಟನೆ.. - District Collector Sunil Kumar.

ಕನಕಗಿರಿಯಲ್ಲಿ ಸಾಂಸ್ಥಿಕ ಕ್ವಾರಂಟೈನ್​ನಲ್ಲಿದ್ದ 50 ವರ್ಷದ ವ್ಯಕ್ತಿಯ ಮಗನಿಗೆ ಈ ಹಿಂದೆ ಸೋಂಕು ದೃಢವಾಗಿ ಕೊರೊನಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈಗ ಈ ವ್ಯಕ್ತಿಗೂ ಪಾಸಿಟಿವ್ ಬಂದಿದ್ದು, ಎಲ್ಲರನ್ನು ಕೋವಿಡ್ -19 ಆಸ್ಪತ್ರೆಗೆ ದಾಖಲಿಸಲಾಗಿದೆ.

6-corona-case-found-at-koppala
ಜಿಲ್ಲಾಧಿಕಾರಿ ಪಿ. ಸುನೀಲ್ ಕುಮಾರ್.
author img

By

Published : Jun 9, 2020, 5:25 PM IST

ಕೊಪ್ಪಳ : ಜಿಲ್ಲೆಯಲ್ಲಿ ಇಂದು ಒಟ್ಟು 6 ಮಂದಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿವೆ ಎಂದು ಜಿಲ್ಲಾಧಿಕಾರಿ ಪಿ. ಸುನೀಲ್‌ಕುಮಾರ್ ತಿಳಿಸಿದರು.

ಕೊರೊನಾ ಕುರಿತಂತೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಾಹಿತಿ ನೀಡಿದ ಅವರು, ಜಿಲ್ಲೆಯಲ್ಲಿ ನಾಲ್ವರು ಪುರುಷರು ಹಾಗೂ ಇಬ್ಬರು ಮಹಿಳೆಯರಿಗೆ ಸೋಂಕು ತಗುಲಿದೆ. ಗಂಗಾವತಿ ತಾಲೂಕಿನ ಢಣಾಪುರದ 52 ವರ್ಷದ ಪುರುಷ, ನಗರದ 18 ವರ್ಷದ ಯುವಕ, ಕಾರಟಗಿಯ ಬಸವೇಶ್ವರ ನಗರದ 45 ವರ್ಷದ ಮಹಿಳೆ, ಕಾರಟಗಿ ತಾಲೂಕಿನ ತಿಮ್ಮಾಪುರ ಗ್ರಾಮದ 23 ವರ್ಷದ ಮಹಿಳೆ, ಮುಂಬೈಯಿಂದ ಬಂದು ಕನಕಗಿರಿಯಲ್ಲಿ ಸಾಂಸ್ಥಿಕ ಕ್ವಾರಂಟೈನ್‌ ಆಗಿದ್ದ 50 ವರ್ಷದ ಪುರುಷ ಹಾಗೂ ಯಲಬುರ್ಗಾ ತಾಲೂಕಿನ ಮುಧೋಳ ಗ್ರಾಮದ 60 ವರ್ಷದ ಪುರುಷನಿಗೆ ಕೊರೊನಾ ಸೋಂಕು ತಗುಲಿರೋದು ದೃಢಪಟ್ಟಿದೆ ಎಂದರು.

ಜಿಲ್ಲಾಧಿಕಾರಿ ಪಿ ಸುನೀಲ್‌ಕುಮಾರ್

ಕನಕಗಿರಿಯಲ್ಲಿ ಸಾಂಸ್ಥಿಕ ಕ್ವಾರಂಟೈನ್​ನಲ್ಲಿದ್ದ 50 ವರ್ಷದ ವ್ಯಕ್ತಿಯ ಮಗನಿಗೆ ಈ ಹಿಂದೆ ಸೋಂಕು ದೃಢವಾಗಿ ಕೊರೊನಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈಗ ಈ ವ್ಯಕ್ತಿಗೂ ಪಾಸಿಟಿವ್ ಬಂದಿದ್ದು, ಎಲ್ಲರನ್ನು ಕೋವಿಡ್ -19 ಆಸ್ಪತ್ರೆಗೆ ದಾಖಲಿಸಲಾಗಿದೆ.

6 ಸೋಂಕಿತರಿಂದ ಈಗ ಪ್ರಾಥಮಿಕ ಸಂಪರ್ಕ ಹೊಂದಿರುವವರ ಪೈಕಿ ಸದ್ಯಕ್ಕೆ 31 ಜನರನ್ನು ಪತ್ತೆ ಹಚ್ಚಲಾಗಿದೆ. ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕಿತರನ್ನು ಪತ್ತೆ ಹಚ್ಚುವ ಕೆಲಸ ಮುಂದುವರೆದಿದೆ. ಕನಕಗಿರಿಯಲ್ಲಿ ಇಂದು ಪತ್ತೆಯಾದ ಕೇಸ್ ಸಾಂಸ್ಥಿಕ ಕ್ವಾರಂಟೈನ್‌ನಲ್ಲಿದ್ದವರಾಗಿದ್ದರಿಂದ ಇದನ್ನು ಹೊರತುಪಡಿಸಿ ಉಳಿದ 6 ಕಡೆ (ತಿಮ್ಮಾಪುರದ ಮಹಿಳೆ ಯಲಬುರ್ಗಾ ತಾಲೂಕಿನ ಮಂಗಳೂರು ಗ್ರಾಮದಿಂದ ತಿಮ್ಮಾಪುರಕ್ಕೆ ನಾಲ್ಕು ದಿನದ ಹಿಂದೆ ತಿಮ್ಮಾಪುರಕ್ಕೆ ಹೋಗಿದ್ದಾಳೆ) ಕಂಟೇನ್ಮೆಂಟ್ ಝೋನ್ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ಭೀತಿ ಮೂಡಿಸುವ ಟ್ರಾವೆಲ್ ಹಿಸ್ಟರಿ : ಯಲಬುರ್ಗಾ ತಾಲೂಕಿನ ಮುಧೋಳ ಗ್ರಾಮದ ಸೋಂಕಿತ ವ್ಯಕ್ತಿಯ ಟ್ರಾವೆಲ್ ಹಿಸ್ಟರಿ ಭೀತಿ ಮೂಡಿಸುತ್ತಿದೆ. ಮೈಸೂರಿನಿಂದ ಚಿತ್ರದುರ್ಗ, ಹೊಸಪೇಟೆ ಮಾರ್ಗವಾಗಿ ಮುಧೋಳಕ್ಕೆ ಈ ವ್ಯಕ್ತಿ ಬಂದಿದ್ದಾನೆ. ಈ ವ್ಯಕ್ತಿ ಪ್ರಯಾಣಿಸಿದ ಬಸ್ ಟ್ರೇಸ್ ಮಾಡಲಾಗುತ್ತಿದೆ. ಸೋಂಕಿತನ ಮಗ ಹಾಗೂ ಪತ್ನಿ ನರೇಗಾ ಯೋಜನೆಯಲ್ಲಿ ಕೆಲಸ ಮಾಡಿದ್ದಾರೆ. ಈ ಯೋಜನೆಯಲ್ಲಿ ಇವರಿಬ್ಬರ ಜೊತೆಗೆ ಸುಮಾರು 40 ಜನ ಕೆಲಸ ಮಾಡಿರುವ ಮಾಹಿತಿ ಇದೆ.

ಈ ಕಾರ್ಮಿಕರು ದ್ವಿತೀಯ ಸಂಪರ್ಕಿತರಾಗುತ್ತಾರೆ. ಸೋಂಕಿತ ವ್ಯಕ್ತಿ ಗ್ರಾಮದಲ್ಲಿನ ಕ್ಷೌರದಂಗಡಿಗೆ ಹೋಗಿದ್ದಾನೆ. ಗ್ರಾಮದಲ್ಲಿಯೂ ಓಡಾಡಿದ್ದಾನೆ ಎಂಬ ಮಾಹಿತಿ ಇದೆ. ಹೀಗಾಗಿ ಮುಧೋಳ ಗ್ರಾಮದಲ್ಲಿ ಸಾಕಷ್ಟು ಆತಂಕ ಮನೆ ಮಾಡಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.