ಗಂಗಾವತಿ : ತಾಲೂಕಿನ ಚಿಕ್ಕ ರಾಂಪುರದ ಬಳಿ ಇರುವ ಪ್ರಸಿದ್ಧ ಅಂಜನಾದ್ರಿ ದೇಗುಲಕ್ಕೆ ಅಯೋಧ್ಯೆ ಮತ್ತು ಮಥುರಾ ಕ್ಷೇತ್ರದ ಭಕ್ತರು ಸುಮಾರು ಐದು ಲಕ್ಷ ರೂಪಾಯಿ ಮೌಲ್ಯದ ಕಿರೀಟಗಳನ್ನು ದೇಣಿಗೆಯಾಗಿ ನೀಡಿದ್ದಾರೆ. ಇತ್ತೀಚಿನ ದಿನಗಳಲ್ಲಿ ಇತಿಹಾಸ ಪ್ರಸಿದ್ಧ ಕಿಷ್ಕಿಂದಾ ಅಂಜನಾದ್ರಿ ದೇಗುಲಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿದ್ದು, ವಿಶ್ವ ವಿಖ್ಯಾತಿಯನ್ನು ಗಳಿಸುತ್ತಿದೆ.
ಅಯೋಧ್ಯೆಯಿಂದ ಆಗಮಿಸಿರುವ ಭಕ್ತರು ದೇಗುಲದ ಆಂಜನೇಯ, ಶ್ರೀರಾಮ, ಲಕ್ಷ್ಮಣ, ಸೀತೆ ಮತ್ತು ಬಾಲಾಂಜನೇಯ ಮೂರ್ತಿಗಳಿಗೆ ಬೆಳ್ಳಿಯ ಕಿರೀಟಗಳನ್ನು ಸಮರ್ಪಿಸಿದ್ದಾರೆ. ಪ್ರತಿವರ್ಷ ಆಯೋಧ್ಯೆ ಮತ್ತು ಮಥುರಾ ಕ್ಷೇತ್ರಗಳಿಂದ ನೂರಾರು ಭಕ್ತರು ಕಿಷ್ಕಿಂದಾ ಅಂಜನಾದ್ರಿ ಬೆಟ್ಟಕ್ಕೆ ಭೇಟಿ ನೀಡುತ್ತಾರೆ.
ಬೆಳ್ಳಿ ಕಿರೀಟಗಳನ್ನು ಅಂಜನಾದ್ರಿ ಬೆಟ್ಟದ ಅರ್ಚಕರಾದ ಮಹಾಂತ ವಿದ್ಯಾದಾಸ ಬಾಬಾ ಅವರಿಗೆ ಹಸ್ತಾಂತರಿಸಲಾಗಿದ್ದು, ವಿಶೇಷ ಪೂಜೆ,ಉತ್ಸವದ ದಿನಗಳಲ್ಲಿ ಕಿರೀಟವನ್ನು ದೇವರಿಗೆ ತೊಡಿಸಲಾಗುವುದು ಎಂದು ತಿಳಿಸಿದ್ದಾರೆ.
ಓದಿ : ತೈಲ ಬೆಲೆಯಲ್ಲಿ ಯಥಾಸ್ಥಿತಿ.. ಹೀಗಿದೆ ರಾಜ್ಯದ ಮತ್ತು ದೇಶದ ಪ್ರಮುಖ ನಗರಗಳಲ್ಲಿನ ಪೆಟ್ರೋಲ್, ಡೀಸೆಲ್ ದರ