ETV Bharat / state

ಜಿಲ್ಲೆಯಲ್ಲಿಂದು ‌44 ಪಾಸಿಟಿವ್ ಕೇಸ್ ಪತ್ತೆ... 200ರ ಗಡಿ ದಾಟಿದ ಸೋಂಕಿತರ ಸಂಖ್ಯೆ!

author img

By

Published : Jul 12, 2020, 12:55 AM IST

ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೋವಿಡ್​ ಪ್ರಕರಣ ಹೆಚ್ಚಾಗುತ್ತಿದ್ದು, ಇದೀಗ ಸೋಂಕಿತ ಪ್ರಕರಣ ಸಂಖ್ಯೆ 200ರ ಗಡಿ ದಾಟಿದೆ.

44 new covid postive case
44 new covid postive case

ಕೊಪ್ಪಳ: ಜಿಲ್ಲೆಯಲ್ಲಿಂದು ಮಹಾಮಾರಿ ಕೊರೊನಾ ಸ್ಪೋಟಗೊಂಡಿದೆ. ಒಂದೇ ದಿನ 44 ಪಾಸಿಟಿವ್ ಕೇಸ್​ಗಳು ಪತ್ತೆಯಾಗಿದ್ದು, ಸೋಂಕಿತರ ಸಂಖ್ಯೆ ಇದೀಗ 200ರ ಗಡಿ ದಾಟಿದೆ. ಜಿಲ್ಲೆಯಲ್ಲಿಂದು ಹೊಸದಾಗಿ 44 ಪಾಸಿಟಿವ್ ಕೇಸ್ ಪತ್ತೆಯಾಗಿವೆ. ಜಿಲ್ಲೆಯಲ್ಲಿ ದಿನೇ ದಿನೇ ಸೋಂಕಿತರ ಸಂಖ್ಯೆ ಹೆಚ್ಚಾಗ್ತಿರೋದು ಜನರನ್ನು ಆತಂಕಕ್ಕೊಳಗಾಗುವಂತೆ ಮಾಡಿದೆ. ಜಿಲ್ಲೆಯಲ್ಲಿ ಈವರೆಗೆ ಒಟ್ಟು 6 ಜನರು ಸೋಂಕಿಗೆ ಬಲಿಯಾಗಿದ್ದು, ಇಂದು ಮತ್ತೆ 11 ಜನರು ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಜಿಲ್ಲೆಯಲ್ಲಿ ಇಲ್ಲಿಯವರೆಗೆ 210 ಪ್ರಕರಣ ದಾಖಲಾಗಿವೆ.

44 new covid postive case found in koppal
ಜಿಲ್ಲೆಯಲ್ಲಿ ಒಂದೇ‌ ದಿನ 44 ಪಾಸಿಟಿವ್ ಕೇಸ್ ಪತ್ತೆ

ಇನ್ನೂ 81 ಸಕ್ರೀಯ ಪ್ರಕರಣಗಳಿಗೆ ಕೊಪ್ಪಳದ ನಿಗದಿತ ಕೋವಿಡ್​-19 ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ. ಜಿಲ್ಲೆಯಲ್ಲಿ ಈವರೆಗೆ ಒಟ್ಟು 14,284 ಜನರ ಗಂಟಲು ದ್ರವ ಮಾದರಿ ಸಂಗ್ರಹಿಸಲಾಗಿದ್ದು 12,060 ಜನರ ವರದಿ ಬಂದಿದೆ. ಇನ್ನೂ 2,224 ಜನರ ವರದಿ ಬರಬೇಕಿದೆ ಎಂದು ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಾಳ್ಕರ್ ತಿಳಿಸಿದ್ದಾರೆ‌.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.