ಗಂಗಾವತಿ : ಹಾಡು ಹಗಲೇ ಖದೀಮರ ತಂಡ ಬೈಕ್ ಸವಾರನಿಂದ ನಾಲ್ಕು ಲಕ್ಷ ರೂಪಾಯಿ ಎಗರಿಸಿದ ಘಟನೆ ನಗರದ ಇಂದಿರಾ ವೃತ್ತದಲ್ಲಿ ನಡೆದಿದೆ.
ವಿರುಪಾಪುರದ ಗಂಗಾಧರ ನರಸಾಪುರ ಹಣ ಕಳೆದುಕೊಂಡವರು. ಬ್ಯಾಂಕ್ ಆಫ್ ಇಂಡಿಯಾದಲ್ಲಿ ಒಡವೆಗಳನ್ನು ಅಡವಿಟ್ಟು ನಾಲ್ಕು ಲಕ್ಷ ರೂಪಾಯಿ ನಗದು ಪಡೆದುಕೊಂಡ ಗಂಗಾಧರ, ಬೈಕ್ನಲ್ಲಿ ತೆರಳುತ್ತಿದ್ದರು. ಈ ವೇಳೆ ಮಾರ್ಗ ಮಧ್ಯೆ ಜುಲೈ ನಗರದ ಶ್ರೀನಿವಾಸ್ ಪೆಟ್ರೋಲ್ ಬಂಕ್ಗೆ ತೆರಳಿದ್ದರು. ಪೆಟ್ರೋಲ್ ತುಂಬಿಸುವ ವೇಳೆ ಬ್ಯಾಗ್ನಲ್ಲಿದ್ದ ಹಣವನ್ನು ಖದೀಮರು ದೋಚಿದ್ದಾರೆ.
ಓದಿ : ಬೇರೆ ಜಾತಿ ಯುವಕನೊಂದಿಗೆ ಪ್ರೀತಿ: ಮಹಿಳೆ ಜೀವಂತ ಸುಟ್ಟ ಕುಟುಂಬ!
ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಖದೀಮರ ಬಂಧನಕ್ಕಾಗಿ ಬಲೆ ಬೀಸಿದ್ದಾರೆ.