ಕುಷ್ಟಗಿ (ಕೊಪ್ಪಳ): ಕುಷ್ಟಗಿ ಪೊಲೀಸ್ ವೃತ್ತ ಕಚೇರಿ ಅಧೀನದ ಕುಷ್ಟಗಿ, ತಾವರಗೇರಾ, ಹನುಮಸಾಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಾಸ್ಕ್ ಧರಿಸದೇ ಹಾಗೂ ಸಾಮಾಜಿಕ ಅಂತರ ಉಲ್ಲಂಘಿಸಿದವರಿಂದ ಕಳೆದ 15 ದಿನಗಳಲ್ಲಿ ಒಟ್ಟು 4,97,900 ರೂ. ದಂಡ ವಸೂಲಿ ಮಾಡಲಾಗಿದೆ ಎಂದು ಸಿಪಿಐ ನಿಂಗಪ್ಪ ರುದ್ರಪ್ಪಗೋಳ್ ತಿಳಿಸಿದರು.
ಈ ಕುರಿತು ಈ ಟಿವಿ ಭಾರತ ಪ್ರತಿನಿಧಿಗೆ ಮಾಹಿತಿ ನೀಡಿದ ಅವರು, ಸಿಪಿಐ ಕಚೇರಿಯಿಂದ 145 ಮಾಸ್ಕ್ ಕೇಸ್, 55 ಸಾಮಾಜಿಕ ಅಂತರ ಉಲ್ಲಂಘಿಸಿದ ಕೇಸ್ನಿಂದ 20,000 ರೂ., ಕುಷ್ಟಗಿ ಪೊಲೀಸ್ ಠಾಣೆಯಿಂದ 1,407 ಮಾಸ್ಕ್ ಕೇಸ್ ನಿಂದ ಒಟ್ಟು 2,58,600 ರೂ., ಹನುಮಸಾಗರ ಪೊಲೀಸ್ ಠಾಣೆಯಿಂದ 823 ಮಾಸ್ಕ್ ಕೇಸ್, 85 ಸಾಮಾಜಿಕ ಅಂತರ ಉಲ್ಲಂಘಿಸಿದ ಕೇಸ್ ನಿಂದ 90,800 ರೂ., ತಾವರಗೇರಾ ಪೊಲೀಸ್ ಠಾಣೆಯಿಂದ 1,239 ಮಾಸ್ಕ್ ಕೇಸ್, 46 ಸಾಮಾಜಿಕ ಅಂತರ ಕೇಸ್ ನಿಂದ 1,28,500ರೂ. ಒಟ್ಟಾರೆಯಾಗಿ ಕುಷ್ಟಗಿ ಪೊಲೀಸ್ ವೃತ್ತದಿಂದ 3,614 ಮಾಸ್ಕ್ ಕೇಸ್, 186 ಸಾಮಾಜಿಕ ಅಂತರ ಉಲ್ಲಂಘಿಸಿದ ಕೇಸ್ಗಳಿಂದ ಒಟ್ಟು 4, 97,900ರೂ. ದಂಡದ ರೂಪದಲ್ಲಿ ವಸೂಲಿಯಾಗಿದೆ.