ETV Bharat / state

ಸ್ಕೇಟಿಂಗ್​ನಲ್ಲಿ 12 ನಿಮಿಷಗಳಲ್ಲಿ 3 ಕಿ.ಮೀ. ಕ್ರಮಿಸಿದ ಮಕ್ಕಳು.. ವ್ಯಾಪಕ ಮೆಚ್ಚುಗೆ..! - 12 ನಿಮಿಷಗಳಲ್ಲಿ 3 ಕಿ.ಮೀ. ಕ್ರಮಿಸಿ ಸಾಧನೆ ಮಾಡಿದ ಮಕ್ಕಳು

ಎಕ್ಸಲೆಂಟ್ ಸ್ಕೇಟಿಂಗ್ ಅಕಾಡೆಮಿ ಹಾಗೂ ಕೊಪ್ಪಳದ ರೂಲ್ ಬಾಲ್ ಸ್ಕೇಟಿಂಗ್ ಜಂಟಿಯಾಗಿ ಹಮ್ಮಿಕೊಂಡಿದ್ದ ಸ್ಕೇಟಿಂಗ್ ಸ್ಪರ್ಧೆಯಲ್ಲಿ 12 ಮಕ್ಕಳು ಪಾಲ್ಗೊಂಡು ರಾಣಾ ಪ್ರತಾಪ್ ಸಿಂಗ್ ವೃತ್ತದಿಂದ ಜಂಗಮರ ಕಲ್ಗುಡಿವರೆಗೆ ರಾಜ್ಯ ಹೆದ್ದಾರಿಯಲ್ಲಿ ಕ್ರಮಿಸಿ ಕೇವಲ 12 ನಿಮಿಷದಲ್ಲಿ ಗುರಿ ತಲುಪಿದರು.

dot
ವ್ಯಾಪಕ
author img

By

Published : Jan 30, 2021, 7:13 PM IST

ಗಂಗಾವತಿ : ಸ್ಕೇಟಿಂಗ್​​ ರೂಲ್​ ಶೂಗಳನ್ನು ಹಾಕಿಕೊಂಡು ನೆಟ್ಟಗೆ ನಿಲ್ಲುವುದೇ ಕಷ್ಟ. ಅಂಥದ್ರಲ್ಲಿ ಈ ಮಕ್ಕಳು ಸ್ಕೇಟಿಂಗ್ ಮೂಲಕ ಕೇವಲ 12 ನಿಮಿಷಗಳಲ್ಲಿ 3 ಕಿಲೋ ಮೀಟರ್ ಕ್ರಮಿಸಿ ದಾಖಲೆ ಬರೆದಿದ್ದಾರೆ.

ಸ್ಕೇಟಿಂಗ್​ನಲ್ಲಿ 12 ನಿಮಿಷಗಳಲ್ಲಿ 3 ಕಿ.ಮೀ. ಕ್ರಮಿಸಿದ ಮಕ್ಕಳು
ನಗರದ ಎಕ್ಸಲೆಂಟ್ ಸ್ಕೇಟಿಂಗ್ ಅಕಾಡೆಮಿ ಹಾಗೂ ಕೊಪ್ಪಳದ ರೂಲ್ ಬಾಲ್ ಸ್ಕೇಟಿಂಗ್ ಜಂಟಿಯಾಗಿ ಹಮ್ಮಿಕೊಂಡಿದ್ದ ಸ್ಕೇಟಿಂಗ್ ಸ್ಪರ್ಧೆಯಲ್ಲಿ 12 ಮಕ್ಕಳು ಪಾಲ್ಗೊಂಡು ರಾಣಾ ಪ್ರತಾಪ್ ಸಿಂಗ್ ವೃತ್ತದಿಂದ ಜಂಗಮರ ಕಲ್ಗುಡಿವರೆಗೆ ರಾಜ್ಯ ಹೆದ್ದಾರಿಯಲ್ಲಿ ಕ್ರಮಿಸಿ ಕೇವಲ 12 ನಿಮಿಷದಲ್ಲಿ ಗುರಿ ತಲುಪಿದರು.
ವರ್ಲ್ಡ್​ ರೆಕಾರ್ಡ್​ ಆಫ್ ಇಂಡಿಯಾ ಎಂಬ ಸಂಸ್ಥೆ ಆಯೋಜಿಸಿದ್ದ ಈ ಕ್ರೀಡಾ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ತರಬೇತುದಾರ ಜಬಿವುಲ್ಲಾ ಮಾತನಾಡಿ, ರಾಜ್ಯ ಹೆದ್ದಾರಿಯಲ್ಲಿ ಮೂರು ಕಿ.ಮೀ. ಸ್ಕೇಟಿಂಗ್ ಈವರೆಗೂ ನಡೆದಿರಲಿಲ್ಲ. ಇದೊಂದು ಮಕ್ಕಳ ಸಾಧನೆಯಾಗಿದೆ. ಈ ಸಾಧನೆಗಾಗಿ ಮಕ್ಕಳು ಕಳೆದ ಹಲವು ತಿಂಗಳಿಂದ ನಗರದ ಎಪಿಎಂಸಿಯಲ್ಲಿ ಬೆಳಗ್ಗೆ 6.30ರಿಂದ 8 ಗಂಟೆವರೆಗೆ ಕಠಿಣ ಅಭ್ಯಾಸ ಮಾಡಿದ್ದರು ಎಂದರು. ಮಕ್ಕಳ ಸ್ಕೇಟಿಂಗ್ ಸಂದರ್ಭದಲ್ಲಿ ಯಾವುದೇ ತೊಂದರೆಯಾಗದಂತೆ ಪೊಲೀಸರು ನಿಗಾ ವಹಿಸಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.