ಗಂಗಾವತಿ(ಕೊಪ್ಪಳ): ಕೊರೊನಾ ಪಿಡುಗು ಆರಂಭವಾದಾಗಿನಿಂದ ಇಲ್ಲಿಯವರೆಗೆ ತಾಲೂಕಿನ ಕನಕಗಿರಿ, ಕಾರಟಗಿ ಸೇರಿದಂತೆ ಹಲವೆಡೆಯ ಒಟ್ಟು 375 ಜನರ ಗಂಟಲು ದ್ರವದ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಇದೀಗ ವರದಿ ಬಂದಿದ್ದು, ಎಲ್ಲಾ ಪ್ರಕರಣಗಳೂ ನೆಗೆಟಿವ್ ಬಂದಿದೆ.
ದೇಶದಲ್ಲಿ ಕೊರೊನಾ ಸೋಂಕು ಹರಡುವಿಕೆ ಆರಂಭವಾದ ಬಳಿಕ ಇಲ್ಲಿನ ಉಪ ವಿಭಾಗದ ಆಸ್ಪತ್ರೆಯಲ್ಲಿ ಶಂಕಿತರ ಸ್ಯಾಂಪಲ್ ಸಂಗ್ರಹಿಸಲಾಗುತ್ತಿದೆ. ಕೊರೊನಾದ ಪ್ರಾಥಮಿಕ ಲಕ್ಷಣವಾದ ದೇಹದ ತಾಪಮಾನ ಪತ್ತೆ ಹಚ್ಚುವ ಉದ್ದೇಶಕ್ಕೆ ಒಟ್ಟು 3,972 ಜನರಿಗೆ ಇಲ್ಲಿವರೆಗೆ ಸ್ಕ್ರೀನಿಂಗ್ ಮಾಡಲಾಗಿದೆ.
ಈ ಪೈಕಿ 375 ಜನರ ಸ್ಯಾಂಪಲ್ ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಾಗಿತ್ತು. ಇಲ್ಲಿನ ಆಸ್ಪತ್ರೆಯಿಂದ ನಿತ್ಯ 13ರಿಂದ 15 ಸ್ಯಾಂಪಲ್ ಪ್ರಯೋಗಾಲಯಕ್ಕೆ ಕಳುಹಿಸಲಾಗುತ್ತಿದೆ.