ಕೊಪ್ಪಳ: ಜಿಲ್ಲೆಯ ಕುಕನೂರು ಪಟ್ಟಣದಲ್ಲಿರುವ ನವೋದಯ ವಿದ್ಯಾಲಯದಲ್ಲಿ ಮತ್ತೆ 20 ಮಕ್ಕಳಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದ್ದು ಓರ್ವ ಶಿಕ್ಷಕ ಸೇರಿದಂತೆ ಒಟ್ಟು 33 ಮಂದಿಗೆ ಕೋವಿಡ್ ದೃಢಪಟ್ಟಿದೆ.
ನವೋದಯ ವಿದ್ಯಾಲಯದಲ್ಲಿ 550 ವಿದ್ಯಾರ್ಥಿಗಳು ಸೇರಿ 618 ಜನರಿದ್ದಾರೆ. ಜನವರಿ 12 ಮತ್ತು 13 ರಂದು ಓರ್ವ ಶಿಕ್ಷಕ ಸೇರಿ 13 ಜನರಲ್ಲಿ ಸೋಂಕು ಕಾಣಿಸಿಕೊಂಡಿತ್ತು. ಮಕ್ಕಳಲ್ಲಿ ಸೋಂಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಶಾಲೆಯಲ್ಲಿನ ಎಲ್ಲ 618 ಜನರ ಮಾದರಿಗಳನ್ನು ಟೆಸ್ಟ್ ಮಾಡಲಾಗಿದ್ದು, ಆ ಪೈಕಿ ಮತ್ತೆ 20 ವಿದ್ಯಾರ್ಥಿಗಳಿಗೆ ಪಾಸಿಟಿವ್ ಬಂದಿದೆ. ಓರ್ವ ಶಿಕ್ಷಕ ಸೇರಿ ಒಟ್ಟು 33 ಜನರಿಗೆ ಸೋಂಕು ತಗುಲಿದೆ.
ಸೋಂಕಿತ ವಿದ್ಯಾರ್ಥಿಗಳಲ್ಲಿ 10 ಮಕ್ಕಳನ್ನು ತಳಕಲ್ಲಿನ ಕೋವಿಡ್ ಕೇರ್ ಸೆಂಟರ್ಗೆ ದಾಖಲಿಸಲಾಗಿದೆ. ಉಳಿದವರನ್ನು ನವೋದಯ ವಸತಿ ಶಾಲೆಯಲ್ಲಿ ಪ್ರತ್ಯೇಕ ಐಸೋಲೇಷನ್ ಮಾಡಲಾಗಿದೆ.
ಓದಿ: ವಿಷಾಹಾರ ಸೇವಿಸಿ ಇಂದಿರಾಗಾಂಧಿ ವಸತಿ ಶಾಲೆಯ 50 ಮಕ್ಕಳು ಅಸ್ವಸ್ಥ: ಆಸ್ಪತ್ರೆಗೆ ದಾಖಲು