ETV Bharat / state

ಗಂಗಾವತಿ: ತಾಲ್ಲೂಕಿನಲ್ಲಿ 30 ಶಾಲೆಗೆ ಎಸ್ಸೆಸ್ಸೆಲ್ಸಿ 'ಎ' ಗ್ರೇಡ್ ಫಲಿತಾಂಶ - ಕ್ಷೇತ್ರ ಶಿಕ್ಷಣಾಧಿಕಾರಿ ಸೋಮಶೇಖರಗೌಡ ತಿಪ್ಪನಾಳ

10ನೇ ತರಗತಿ ಮಕ್ಕಳ ಫಲಿತಾಂಶ ಸೋಮವಾರ ಸಂಜೆ ಪ್ರಕಟವಾಗಿದ್ದು ತಾಲ್ಲೂಕಿನ 96 ಶಾಲೆಗಳ ಪೈಕಿ 30 ಶಾಲೆಗೆ ಎ ಗ್ರೇಡ್ ಫಲಿತಾಂಶ ಸಿಕ್ಕಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಸೋಮಶೇಖರಗೌಡ ತಿಪ್ಪನಾಳ ತಿಳಿಸಿದ್ದಾರೆ.

gangavathi
gangavathi
author img

By

Published : Aug 10, 2020, 10:54 PM IST

ಗಂಗಾವತಿ: ಈ ಬಾರಿ ಹತ್ತನೇ ತರಗತಿ ಮಕ್ಕಳ ಫಲಿತಾಂಶವನ್ನು ಶಾಲಾವಾರು ಮುಖ್ಯ ಶಿಕ್ಷಕರ ಲಾಗಿನ್‌ಗೆ ಕಳುಹಿಸಿಕೊಡಲಾಗಿದ್ದು, ಇಲಾಖೆ ವೈಯಕ್ತಿಕ ಫಲಿತಾಂಶ ಕ್ರೋಢೀಕರಣದಲ್ಲಿ ತೊಡಗಿದೆ. ಮಂಗಳವಾರ ಸಮಗ್ರ ಫಲಿತಾಂಶ ಸಿಗಲಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಸೋಮಶೇಖರಗೌಡ ತಿಪ್ಪನಾಳ ತಿಳಿಸಿದ್ದಾರೆ.

ತಾಲ್ಲೂಕಿನ ಅನುದಾನಿತ, ಅನುದಾನ ರಹಿತ ಮತ್ತು ಸರಕಾರಿ ಶಾಲೆಗಳ ಪೈಕಿ 30 ಎ ಗ್ರೇಡ್, 31 ಬಿ ಹಾಗೂ 35 ಸಿ ಗ್ರೇಡ್ ಎಂದು ಫಲಿತಾಂಶ ಲಭಿಸಿದೆ. ಈ ಬಾರಿಯ ಫಲಿತಾಂಶವನ್ನು ಆಯಾ ಶಾಲೆಯ ಮಕ್ಕಳ ಫಲಿತಾಂಶದ ಮೇಲೆ ಅವಲಂಭಿತವಾಗಿದೆ. ಶಾಲೆಯಲ್ಲಿ ಮಕ್ಕಳು ಸಾಧಿಸುವ ಅಂಕಗಳ ಆಧಾರದ ಮೇಲೆ ಅಂದರೆ 60ಕ್ಕಿಂತ ಹೆಚ್ಚು, 50ಕ್ಕಿಂತ ಕಡಿಮೆ ಹಾಗೂ 40ಕ್ಕಿಂತಲೂ ಕಡಿಮೆ ಅಂಕಗಳಿಸುವ ಶಾಲೆಯಲ್ಲಿನ ಮಕ್ಕಳನ್ನು ಶೇ.40, 40 ಹಾಗೂ 20ರಂತೆ ಗುಣಿಸಿ, ಭಾಗಿಸಿ ಫಲಿತಾಂಶ ನೀಡಲಾಗಿದೆ. ಈ ಭಾರಿ ಶಿಕ್ಷಣ ಇಲಾಖೆ ವಿಭಿನ್ನ ರೀತಿಯಲ್ಲಿ ಮಕ್ಕಳ ಫಲಿತಾಂಶವನ್ನು ನೀಡಿದ್ದು, ಗ್ರೇಡಿಂಗ್ ಧಾರಿಸಿ ಎಬಿಸಿ ಎಂದು ವಿಭಜನೆ ನಡೆಸಿದೆ. ಹೀಗಾಗಿ ಫಲಿತಾಂಶ ಕ್ರೋಢೀಕರಣದಲ್ಲಿ ತಾಂತ್ರಿಕ ಸಮಸ್ಯೆಯಾಗಿದೆ ಎಂದು ಶಿಕ್ಷಣಾಧಿಕಾರಿ ಹೇಳಿದರು.

ಈ ಬಾರಿ ಶಿಕ್ಷಣ ಇಲಾಖೆ ವಿಭಿನ್ನ ರೀತಿಯಲ್ಲಿ ಮಕ್ಕಳ ಫಲಿತಾಂಶವನ್ನು ನೀಡಿದ್ದು, ಗ್ರೇಡಿಂಗ್ ಆಧರಿಸಿ ಎ,ಬಿ,ಸಿ ಎಂದು ವಿಭಜನೆ ನಡೆಸಿದೆ. ಹೀಗಾಗಿ ಫಲಿತಾಂಶ ಕ್ರೋಢೀಕರಣದಲ್ಲಿ ತಾಂತ್ರಿಕ ಸಮಸ್ಯೆಯಾಗಿದೆ ಎಂದು ಅವರು ತಿಳಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.