ಗಂಗಾವತಿ: ತಾಲ್ಲೂಕಿನ ಆನೆಗೊಂದಿ ಗ್ರಾಮ ಪಂಚಾಯಿತಿಗೆ ನಡೆದ ಚುನಾವಣೆಯಲ್ಲಿ ನಾನಾ ವಾರ್ಡ್ಗಳಿಂದ ಏಕಕಾಲಕ್ಕೆ ಅತ್ತೆ, ಮಾವ ಹಾಗೂ ಅಳಿಯ ಆಯ್ಕೆಯಾಗುವ ಮೂಲಕ ಕುತೂಹಲ ಕೆರಳಿಸಿದ್ದಾರೆ.
ಎರಡನೇ ಬಾರಿಗೆ ಸ್ಪರ್ಧೆ ಮಾಡಿದ 1ನೇ ವಾರ್ಡ್ ಪ್ರತಿನಿಧಿ ಕೋಶಗಿ ತಿಮ್ಮಪ್ಪ, ಎರಡನೇ ವಾರ್ಡ್ನಿಂದ ಮೊದಲ ಬಾರಿಗೆ ಕಣಕ್ಕಿಳಿದ ಕೆ. ಮಹಾದೇವಿ ಹಾಗೂ ಇದೇ ವಾರ್ಡ್ನಿಂದ ಎಸ್ಟಿ ಮೀಸಲಾತಿ ಕ್ಷೇತ್ರಕ್ಕೆ ಸ್ಪರ್ಧೆ ಮಾಡಿದ್ದ ಕೆ. ನರಸಿಂಹಲು ಗೆಲುವು ಪಡೆದಿದ್ದಾರೆ.
ನರಸಿಂಹಲು 296 ಮತಗಳನ್ನು ಪಡೆದು ಸಮೀಪದ ಪ್ರತಿಸ್ಪರ್ಧಿ ಗೋವಿಂದಪ್ಪ (138) ಅವರನ್ನು ಪರಾಭವಗೊಳಿಸಿದ್ದಾರೆ.
ಮಹಾದೇವಿ 518 ಮತ ಪಡೆದರೆ ಎದುರಾಳಿ ಅಂಜಲಿ ರಾಮಕೃಷ್ಣ ಕೇವಲ 58 ಮತ ಗಳಿಸಿದ್ದರು. ತಿಮ್ಮಪ್ಪ ಬಾಳೆಕಾಯಿ 465 ಮತ ಪಡೆದರೆ, ಅವರ ಪ್ರತಿಸ್ಪರ್ಧಿ ರಾಘವೇಂದ್ರ 352 ಮತ ಪಡೆದುಕೊಂಡಿದ್ದಾರೆ.