ಕೊಪ್ಪಳ: ಜಿಲ್ಲೆಯಲ್ಲಿ ಒಂದೇ ದಿನ 198 ಕೋವಿಡ್ ಪಾಸಿಟಿವ್ ಕೇಸ್‍ಗಳು ಪತ್ತೆಯಾಗಿವೆ.
ಕೊಪ್ಪಳ ತಾಲೂಕಿನಲ್ಲಿ 98, ಗಂಗಾವತಿ 58, ಕುಷ್ಟಗಿ 27 ಹಾಗೂ ಯಲಬುರ್ಗಾ ತಾಲೂಕಿನಲ್ಲಿ 15 ಪ್ರಕರಣ ಸೇರಿ ಜಿಲ್ಲೆಯಲ್ಲಿ ಒಟ್ಟು 198 ಕೊರೊನಾ ಸೋಂಕು ಪ್ರಕರಣಗಳು ದೃಢಪಟ್ಟಿವೆ.
ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 15,248 ಕ್ಕೇರಿದೆ. ಇಂದು 39 ಜನರು ಗುಣಮುಖರಾಗಿದ್ದು, ಒಟ್ಟು 14,079 ಜನರು ಗುಣಮುಖರಾಗಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 882 ಸಕ್ರಿಯ ಪ್ರಕರಣಗಳಿದ್ದು, ಆ ಪೈಕಿ 792 ಸೋಂಕಿತರು ಹೋಂ ಐಸೋಲೇಷನ್‍ನಲ್ಲಿದ್ದಾರೆ. ಉಳಿದಂತೆ 90 ಜನ ಸೋಂಕಿತರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ನೈಟ್ ಕರ್ಫ್ಯೂ
ಕೊರೊನಾ ಎರಡನೇ ಅಲೆ ತೀವ್ರಗೊಂಡಿರುವುದರಿಂದ ಏಪ್ರಿಲ್ 21 ರಿಂದ ಮೇ 4 ರವರೆಗೆ ರಾಜ್ಯ ಸರ್ಕಾರ ರಾತ್ರಿ ಕರ್ಫ್ಯೂ ಜಾರಿ ಮಾಡಿದೆ. ಈ ಹಿನ್ನೆಲೆಯಲ್ಲಿ ಮೊದಲ ದಿನವಾದ ನಿನ್ನೆ ರಾತ್ರಿ 9 ಗಂಟೆಯಾದರೂ ನಗರದ ಬಸ್ ನಿಲ್ದಾಣದ ಪ್ರದೇಶ, ಲೇಬರ್ ಸರ್ಕಲ್ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಅಂಗಡಿಗಳು, ಜನರ ಓಡಾಟ ಸಹಜವಾಗಿತ್ತು. ನೈಟ್ ಕರ್ಫ್ಯೂ ಕುರಿತ ನಗರಸಭೆಯ ಅನೌನ್ಸ್ ವಾಹನ ಓಡಾಡುತ್ತಿದ್ದರೂ ಸಹ ಬೇಕರಿಗಳು, ಹೋಟೇಲ್‌ಗಳು, ಹೂ-ಹಣ್ಣಿನ ಅಂಗಡಿಗಳು ಸೇರಿದಂತೆ ವಿವಿಧ ಅಂಗಡಿಗಳು ತೆರೆದೇ ಇದ್ದವು. ಆದರೆ ಮದ್ಯದಂಗಡಿಗಳು 9 ಗಂಟೆಯ ಒಳಗಾಗಿ ಬಂದ್ ಆಗಿದ್ದವು.
ಇನ್ನುಳಿದಂತೆ 9.20 ರ ವೇಳೆಗೆ ಒಂದೊಂದೇ ಅಂಗಡಿಗಳು ಬಾಗಿಲು ಹಾಕತೊಡಗಿದ್ದು ಕಂಡುಬಂತು.