ಕೊಪ್ಪಳ: ಜಿಲ್ಲೆಯಲ್ಲಿಂದು 194 ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದು, ಸೋಂಕಿತರ ಸಂಖ್ಯೆ 8804 ಕ್ಕೆ ಏರಿಕೆಯಾಗಿದೆ.
ಇಂದಿನ ಕೋವಿಡ್ ವಿವರ:
ಗಂಗಾವತಿ ತಾಲೂಕಿನಲ್ಲಿ- 87, ಕೊಪ್ಪಳ ತಾಲೂಕಿನಲ್ಲಿ 44, ಕುಷ್ಟಗಿ ತಾಲೂಕಿನಲ್ಲಿ 33 ಹಾಗೂ ಯಲಬುರ್ಗಾ ತಾಲೂಕಿನಲ್ಲಿ 30 ಪ್ರಕರಣ ಸೇರಿ ಇಂದು ಒಟ್ಟು 194 ಪ್ರಕರಣಗಳು ಪತ್ತೆಯಾಗಿವೆ.
ಮೃತರ ಮಾಹಿತಿ:
ಇಂದು 3 ಜನರು ಸೋಂಕಿತರು ಸಾವನ್ನಪ್ಪಿದ್ದು, ಜಿಲ್ಲೆಯಲ್ಲಿ ಈವರೆಗೆ ಸೋಂಕಿನಿಂದ ಒಟ್ಟು 204 ಜನ ಸೋಂಕಿತರು ಮೃತಪಟ್ಟಿದ್ದಾರೆ.
ಗುಣಮುಖ:
ಜಿಲ್ಲೆಯಲ್ಲಿಂದು 209 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಈವರೆಗೆ ಒಟ್ಟು 6848 ಜನರು ಗುಣಮುಖರಾಗಿದ್ದಾರೆ. 1471 ಜನ ಸೋಂಕಿತರನ್ನು ಹೋಂ ಐಸೋಲೇಷನ್ ಮಾಡಲಾಗಿದೆ.
ಇನ್ನುಳಿದ ಪ್ರಕರಣಗಳಿಗೆ ನಿಗದಿತ ಕೋವಿಡ್ -19 ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ ಎಂದು ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್ ತಿಳಿಸಿದ್ದಾರೆ.