ಕೊಪ್ಪಳ: ಜಿಲ್ಲೆಯಲ್ಲಿ ಇಂದು 148 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, ಸೋಂಕಿತರ ಸಂಖ್ಯೆ 8447 ಕ್ಕೆ ಏರಿಕೆಯಾಗಿದೆ.
ಕೋವಿಡ್ ಪ್ರಕರಣಗಳ ವಿವರ:
ಇಂದು ಗಂಗಾವತಿ ತಾಲೂಕಿನಲ್ಲಿ- 64, ಕೊಪ್ಪಳ ತಾಲೂಕಿನಲ್ಲಿ- 41, ಕುಷ್ಟಗಿ ತಾಲೂಕಿನಲ್ಲಿ -30 ಹಾಗೂ ಯಲಬುರ್ಗಾ ತಾಲೂಕಿನಲ್ಲಿ- 13 ಪ್ರಕರಣ ಸೇರಿದಂತೆ ಒಟ್ಟು 148 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ.
ಮೃತರಿಷ್ಟು :
ಜಿಲ್ಲೆಯಲ್ಲಿಂದು 4 ಜನ ಸೋಂಕಿತರು ಸಾವನ್ನಪ್ಪಿದ್ದು, ಈವರೆಗೆ ಸೋಂಕಿನಿಂದ ಒಟ್ಟು 195 ಜನ ಸೋಂಕಿತರು ಮೃತಪಟ್ಟಿದ್ದಾರೆ.
ಗುಣಮುಖ:
ಈ ದಿನ 152 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದು , ಈವರೆಗೆ ಒಟ್ಟು 6494 ಜನರು ಗುಣಮುಖರಾಗಿದ್ದಾರೆ. ಇನ್ನು 1473 ಜನ ಸೋಂಕಿತರನ್ನು ಹೋಂ ಐಸೋಲೇಷನ್ ಮಾಡಲಾಗಿದೆ.
ಇನ್ನುಳಿದ ಪ್ರಕರಣಗಳಿಗೆ ನಿಗದಿತ ಕೋವಿಡ್ -19 ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ ಎಂದು ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್ ತಿಳಿಸಿದ್ದಾರೆ.