ETV Bharat / state

ಕೊಪ್ಪಳ ಜಿಲ್ಲೆಯಲ್ಲಿ 13 ಶಂಕಿತ ಬ್ಲ್ಯಾಕ್ ಫಂಗಸ್​ ಪ್ರಕರಣ; ಡಿಸಿ ಮಾಹಿತಿ - ಗವಿಮಠ ಕೋವಿಡ್ ಕೇರ್ ಸೆಂಟರ್

ಕೊಪ್ಪಳ ಜಿಲ್ಲೆಯಲ್ಲಿ ಐದು ಕಪ್ಪು ಶಿಲೀಂಧ್ರ ಸಕ್ರಿಯ ಪ್ರಕರಣಗಳಿವೆ ಎಂದು ನಾವು ಭಾವಿಸಿದ್ದೇವೆ. ಇದರ ಹೊರತಾಗಿ 13 ಬ್ಲ್ಯಾಕ್ ಫಂಗಸ್ ಶಂಕಿತ ಪ್ರಕರಣಗಳಿವೆ. ಆ 13 ಜನರ ಮೆಡಿಕಲ್ ವರದಿ ಬರಬೇಕಿದೆ ಎಂದು ಡಿಸಿ ವಿಕಾಸ್​ ಕಿಶೋರ್​​ ಸುರಳ್ಕರ್​​ ಅವರು ಮಾಹಿತಿ ನೀಡಿದ್ದಾರೆ.

13-suspect-black-fungus-cases-found-in-koppal-district
ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್
author img

By

Published : May 31, 2021, 9:01 PM IST

ಕೊಪ್ಪಳ: ಜಿಲ್ಲೆಯಲ್ಲಿ 13 ಶಂಕಿತ ಬ್ಲ್ಯಾಕ್ ಫಂಗಸ್ ಪ್ರಕರಣಗಳು ಪತ್ತೆಯಾಗಿದ್ದು, ವರದಿ ಬಂದ ನಂತರ ಖಚಿತವಾಗಲಿವೆ ಎಂದು ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್ ಹೇಳಿದ್ದಾರೆ‌.

ಜಿಲ್ಲೆಯಲ್ಲಿ ಈಗಾಗಲೇ ಆರು ಜನರಿಗೆ ಬ್ಲ್ಯಾಕ್ ಫಂಗಸ್ ದೃಢಪಟ್ಟಿದೆ. ಈ ಪೈಕಿ ಇಬ್ಬರು ಮೃತಪಟ್ಟಿದ್ದಾರೆ. ಇನ್ನುಳಿದಂತೆ ನಾಲ್ಕು ಜನರಿಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನಡೆಯುತ್ತಿದೆ. ನಿನ್ನೆ ಗವಿಮಠ ಕೋವಿಡ್ ಕೇರ್ ಸೆಂಟರ್​ನಲ್ಲಿನ ಓರ್ವ ಸೋಂಕಿತನಿಗೆ ಕಪ್ಪು ಶಿಲೀಂಧ್ರ ರೋಗ ಕಾಣಿಸಿಕೊಂಡ ಶಂಕೆ ಇದೆ. ಇನ್ನು ಮೆಡಿಕಲ್ ರಿಪೋರ್ಟ್ ಬರಬೇಕಿದೆ ಎಂದು ಮಾಹಿತಿ ನೀಡಿದರು.

ನಮ್ಮ ಜಿಲ್ಲೆಯಲ್ಲಿ ಐದು ಕಪ್ಪು ಶಿಲೀಂಧ್ರ ಸಕ್ರಿಯ ಪ್ರಕರಣಗಳಿವೆ ಎಂದು ನಾವು ಭಾವಿಸಿದ್ದೇವೆ. ಇದರ ಹೊರತಾಗಿ 13 ಬ್ಲ್ಯಾಕ್ ಫಂಗಸ್ ಶಂಕಿತ ಪ್ರಕರಣಗಳಿವೆ. ಆ 13 ಜನರ ಮೆಡಿಕಲ್ ವರದಿ ಬರಬೇಕಿದೆ. ಈ 13 ಜನರಲ್ಲಿ ಯಾರೂ ಆಸ್ಪತ್ರೆಗೆ ದಾಖಲಾಗಿಲ್ಲ. ಜಿಲ್ಲಾ ಆಸ್ಪತ್ರೆಯಲ್ಲಿ ಮ್ಯೂಕೋರ್ಮೈಕೋಸಿಸ್ ​ಗೆ ಪ್ರತ್ಯೇಕ ವಾರ್ಡ್ ಇದ್ದು ಅಲ್ಲಿ ದಾಖಲಾಗುವಂತೆ ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್ ಮನವಿ ಮಾಡಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.