ETV Bharat / state

ಕೊಪ್ಪಳದಲ್ಲಿಂದು ನಾಲ್ಕು ಮಕ್ಕಳು ಸೇರಿ 13 ಜನರಿಗೆ ಸೋಂಕು ದೃಢ

ಇಂದು ನಾಲ್ಕು ಮಕ್ಕಳು ಸೇರಿ 13 ಜನರಿಗೆ ಸೋಂಕು ದೃಢಪಟ್ಟಿದೆ. ಸದ್ಯ ಸೋಂಕಿತರ ಪ್ರಾಥಮಿಕ ಸಂಪರ್ಕಿತರನ್ನು ಪತ್ತೆ ಮಾಡುತ್ತಿರುವುದಾಗಿ ಜಿಲ್ಲಾಡಳಿತ ತಿಳಿಸಿದೆ.

Koppal corona case
Koppal corona case
author img

By

Published : Jul 1, 2020, 4:47 PM IST

ಕೊಪ್ಪಳ: ಜಿಲ್ಲೆಯಲ್ಲಿಂದು 13 ಜನರಿಗೆ ಸೋಂಕು ತಗುಲಿರುವುದು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 97ಕ್ಕೆ ಏರಿಕೆಯಾಗಿದೆ.

ಇಂದು ನಾಲ್ಕು ಮಕ್ಕಳು ಸೇರಿ 13 ಜನರಿಗೆ ಸೋಂಕು ದೃಢವಾಗಿದ್ದು, ಈ ಕುರಿತಂತೆ ಜಿಲ್ಲಾಡಳಿತ ಅಧಿಕೃತ ಮಾಹಿತಿ ನೀಡಿದೆ. ಹೌದು, ಇಂದು ಪತ್ತೆಯಾದ13 ಜನ ಸೋಂಕಿತರಲ್ಲಿ ಎಂಟು ಜನರು ಗಂಗಾವತಿ ತಾಲೂಕು, ಕುಷ್ಟಗಿ ತಾಲೂಕಿನ ಮೂವರು ಹಾಗೂ ಕೊಪ್ಪಳ ತಾಲೂಕಿನ ಇಬ್ಬರಲ್ಲಿ ಸೋಂಕು ದೃಢವಾಗಿದೆ.

ಗಂಗಾವತಿ ನಗರದ 10 ವರ್ಷದ ಬಾಲಕಿ, 7 ವರ್ಷದ ಬಾಲಕಿ, 23 ವರ್ಷದ ಮಹಿಳೆ, 23 ವರ್ಷದ ಪುರುಷ, 48 ವರ್ಷದ ಪುರುಷ ಹಾಗೂ ಗಂಗಾಗತಿ ತಾಲೂಕಿನ ವೆಂಕಟಗಿರಿಯ 40 ವರ್ಷದ ಪುರುಷ, ಯರಡೋಣಿ ಗ್ರಾಮದ 34 ವರ್ಷದ ಪುರುಷ, ಚಿಕ್ಕಜಂತಕಲ್ ಗ್ರಾಮದ 18 ವರ್ಷದ ಯುವಕ, ಕೊಪ್ಪಳ ತಾಲೂಕಿನ ಮುನಿರಾಬಾದ್ ಗ್ರಾಮದ 34 ವರ್ಷದ ಮಹಿಳೆ, ಕೊಪ್ಪಳ ನಗರದ 49 ವರ್ಷದ ಪುರುಷ, ಕುಷ್ಟಗಿ ತಾಲೂಕಿನ ದೊಣ್ಣೆಗುಡ್ಡ ಗ್ರಾಮದ 12 ವರ್ಷದ ಇಬ್ಬರು ಬಾಲಕರು ಹಾಗೂ 41 ವರ್ಷದ ಪುರುಷನಿಗೆ ಇಂದು ಸೋಂಕು ದೃಢಪಟ್ಟಿದೆ.

ಸದ್ಯ ಸೋಂಕಿತರ ಪ್ರಾಥಮಿಕ ಸಂಪರ್ಕಿತರನ್ನು ಪತ್ತೆ ಮಾಡುತ್ತಿರುವುದಾಗಿ ಜಿಲ್ಲಾಡಳಿತ ತಿಳಿಸಿದೆ. ಸೋಂಕಿತರನ್ನು ಕೊಪ್ಪಳದ ನಿಗದಿತ ಕೋವಿಡ್-19 ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.